Advertisement
ಯಕ್ಷಗಾನದ ಪ್ರಸಿದ್ಧ ಹಿರಿಯ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್(96)ಅವರು ಜ. 23ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Related Articles
Advertisement
ಬಡಗುತಿಟ್ಟಿನ ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ದವಾದ ಹಾಗೂ ಭಕ್ತಿಪೂರ್ಣವಾದ ಪ್ರಸಂಗ ಶ್ರೀ ದೇವಿ ಮಾಹಾತ್ಮೆ ಪ್ರಸಂಗದ ಬಡಗುತಿಟ್ಟಿನ ಮೊದಲ ಪ್ರಯೋಗ ನಡೆದದ್ದು, ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ,. ಮೊದಲ ಪ್ರದರ್ಶನದಲ್ಲಿ ಶ್ರೀ ದೇವಿಯಾಗಿ ಬಣ್ಣ ಹಚ್ಚಿದ್ದು ಮಾರ್ಗೋಳಿಯವರು ಎಂಬ ದಾಖಲೆಯಿದೆ.
ಐವತ್ತು ವರುಷಗಳ ರಂಗ ಬದುಕಿನಲ್ಲಿ ತೆಂಕು ಬಡಗಿನಲ್ಲಿ ತಿರುಗಾಟ ಮಾಡಿದ ಮಾರ್ಗೋಳಿಯವರು ಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದರು. ಬಡಗಿನ ಹಳೆಯ ಕ್ರಮಗಳ ಬಗ್ಗೆ ಅಧಿಕೃತ ಅನುಭವದ ಆಗಾರವಾಗಿದ್ದರು ನಾಲ್ಕನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿದ್ದ ಆರು ಅನಿವಾರ್ಯತೆಯೊಂದಿಗೆ ಬೆಳೆದು, ಬಡಗುತಿಟ್ಟಿನ ಬಹುತೇಕ ಖ್ಯಾತರೊಡನೆ ಪಾತ್ರವಹಿಸಿ, ತಾನೂ ಗಟ್ಟಿಯಾಗಿ ರ ತೆಂಕುಟ್ಟಿನಲ್ಲಿ ಪ್ರಸಿದ್ಧವಾದ ‘ದೇವಿ ಮಹಾತ್ಮೆ’ ಪ್ರಸಂಗದ ‘ಶ್ರೀದೇವಿ’ ಪಾತ್ರಕ್ಕೆ ಬಡಗಿನ ರಂಗದಲ್ಲಿ ಜೀವತುಂಬಿ, ಅದಕ್ಕೆ ಪ್ರತ್ಯೇಕವಾದ ಎತ್ತರದ ಸ್ಥಾನ ರೂಪಿಸಿದ ಕೀರ್ತಿ ಪಡೆದಿದ್ದರು. ಅವರ ಸಾಧನೆಗೆ, ಕಾಲ ಸೇವೆಗೆ ನೂರಾರು ಸನ್ಮಾನಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.