Advertisement

ಲಿಂಗ ತಾರತಮ್ಯ ಮಾಡದಂತೆ ಜಾಗೃತಿ ಮೂಡಿಸಿ: ನ್ಯಾ|ಕವಿತಾ

12:21 PM Oct 14, 2018 | |

ಚಿಂಚೋಳಿ: ಹಳ್ಳಿಯ ಹಾಗೂ ಅನಕ್ಷರಸ್ಥ ಮಹಿಳೆಯರಿಗೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹೆಣ್ಣು-ಗಂಡು ಎನ್ನುವ ಲಿಂಗ ತಾರತಮ್ಯ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದು ಚಿಂಚೋಳಿ ಸಿವಿಲ್‌ ನ್ಯಾಯಾಲಯ ಹಿರಿಯ ಶ್ರೇಣಿ ನ್ಯಾಯಾಧೀಶೆ ಕವಿತಾ ಎಸ್‌.ಉಂಡೋಡಿ ಹೇಳಿದರು.

Advertisement

ಪಟ್ಟಣದ ಸಿ.ಬಿ. ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರೂಣ ಹತ್ಯೆ ಮತ್ತು ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು. ದಿಟ್ಟತನದಿಂದ ಮಹಿಳೆಯರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಸರಕಾರಿ ಸಹಾಯಕ ಅಭಿಯೋಜಕ ರವಿಕುಮಾರ ಬಾಚಿಹಾಳ, ಡಾ| ವಿಜಯಕುಮಾರ ಜಾಪಟ್ಟಿ, ಸಿಡಿಪಿಒ ತಿಪ್ಪಣ್ಣ ಸಿರಸಗಿ, ಟಿಎಚ್‌ಒ ಡಾ| ಮಹ್ಮದ್‌ ಗಫಾರ, ಪ್ರಾಚಾರ್ಯ ಡಾ| ಎಸ್‌.ಹೆಚ್‌. ಹೊಸಮನಿ  ತನಾಡಿದರು. ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ಪ್ರೇಮಕುಮಾರ, ಶ್ರೀಮಂತ ಕಟ್ಟಿಮನಿ ಹಾಜರಿದ್ದರು. ನ್ಯಾಯವಾದಿ ಎಸ್‌.ಎ. ಪೊಂಗಾ ಸ್ವಾಗತಿಸಿದರು, ನ್ಯಾಯವಾದಿ ಎ.ಎಸ್‌. ಹೆಗಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next