Advertisement

ವಿಜ್ಞಾನದ ಕಲಿಕಾ ಸಂಗತಿಗಳನ್ನು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಿ

12:49 PM Nov 22, 2017 | Team Udayavani |

ಧಾರವಾಡ: ಪಠ್ಯಕ್ರಮದಲ್ಲಿರುವ ವಿಜ್ಞಾನದ ಪ್ರತಿಯೊಂದೂ ಕಲಿಕಾ ಸಂಗತಿಗಳನ್ನು ಏನು? ಏಕೆ? ಹೇಗೆ? ಎಂದೆಲ್ಲ ಪ್ರಶ್ನಿಸುವ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ಅನ್ವೇಷಣೆಗೆ ತೆರೆದುಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಪ್ರಾಚಾರ್ಯೆ ಸುಮಂಗಳಾ ಕುಚಿನಾಡ ಹೇಳಿದರು. 

Advertisement

ನಗರದ ಡಯಟ್‌ನಲ್ಲಿ ರಾಷ್ಟ್ರದ ನಿರ್ಮಾಣಕ್ಕೆ ವಿಜ್ಞಾನ ತಂತ್ರಜ್ಞಾನ ಹಾಗೂ ಗಣಿತ ಎಂಬ ಪ್ರಧಾನ ಶೀರ್ಷಿಕೆಯಡಿ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಹಾಗೂ ಡಯಟ್‌ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತವು ವಿಶೇಷವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭುತ್ವ ಸಾಧಿಸಿದ್ದು, ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ಕ್ಷೇತ್ರದಲ್ಲಿ ಕಲಿಕಾ ಆಸಕ್ತಿ ಹಾಗೂ ಆಳ ಅಧ್ಯಯನದ ಬದ್ಧತೆ ಹೊಂದಿ ರಾಷ್ಟ್ರ ಬಯಸುವ ಉತ್ಕೃಷ್ಟ ವಿಜ್ಞಾನಿಗಳಾಗುವ ಮಹೋದ್ದೇಶ ಹೊಂದಬೇಕು ಎಂದರು. 

ಡಯಟ್‌ ಉಪಪ್ರಾಚಾರ್ಯ ಸಾಯಿರಾಬಾನು ಖಾನ್‌, ಉಪನ್ಯಾಸಕರಾದ ಜಿ.ಎಂ. ವೃಷಭೇಂದ್ರಯ್ಯ, ಜಯಶ್ರೀ ಕಾರೇಕರ, ಅಶೋಕುಮಾರ ಸಿಂದಗಿ, ರಾಜೇಶ್ವರಿ ಕುಡಚಿ, ಡಾ| ಶೋಭಾ ನಾಯ್ಕರ, ವಿಜಯಲಕ್ಷ್ಮೀ ಹಂಚಿನಾಳ,  ಎಚ್‌.ಪಿ. ಕಡ್ಲಿಮಟ್ಟಿ, ಪ್ರಕಾಶ ಅಂಗಡಿ, ಪ್ರಮಿಳಾ ಬೂದಿಹಾಳ,

ಎಂ.ಎ. ಕುಲಕರ್ಣಿ, ನಜಾಬಾನು ದಾವಲಸಾಬನವರ, ಸಾವಿತ್ರಿ ಕೋಳಿ, ಕೆ.ಎಸ್‌. ಬಂಗಾರಿ, ಸಾಯಿ ವಿಜ್ಞಾನ ಪಿಯು ಕಾಲೇಜಿನ ನಿರ್ದೇಶಕ ಶಿವಶಂಕರ ರಾವ್‌, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಸಂಜೀವಕುಮಾರ ಭೂಶೆಟ್ಟಿ, ಗುರುಮೂರ್ತಿ ಯರಗಂಬಳಿಮಠ, ಶಿವಣ್ಣ ಯಾವಗಲ್ಲ ಇದ್ದರು. 

Advertisement

ಬಾಲ ವಿಜ್ಞಾನಿಗಳ ಕಲರವ: ಆರೋಗ್ಯ ಮತ್ತು ಯೋಗಕ್ಷೇಮ, ಸಂಪನ್ಮೂಲ ನಿರ್ವಹಣೆ ಮತ್ತು  ಆಹಾರ ಭದ್ರತೆ, ತ್ಯಾಜ್ಯ ನಿರ್ವಹಣೆ ಹಾಗೂ ನೀರಿನ ಆಗರ ಸಂರಕ್ಷಣೆ, ಸಾರಿಗೆ ಸಂಪರ್ಕ, ಡಿಜಿಟಲ್‌ ತಂತ್ರಜ್ಞಾನ-ಪರಿಹಾರಗಳು ಹಾಗೂ ಗಣಿತಶಾಸ್ತ್ರದಿಂದ ವಿನ್ಯಾಸಗೊಳಿಸುವಿಕೆ  ಎಂಬ 6 ಉಪ ಶೀರ್ಷಿಕೆಯಡಿ ಪ್ರೌಢಶಾಲಾ ವಿದ್ಯಾರ್ಥಿಗಳೇ ಸಿದ್ಧಪಡಿಸಿ ತಂದಿದ್ದ 80 ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು.

ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಪ್ರೌಢಶಾಲೆಗಳ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಮಾದರಿಗಳು ಗಮನ ಸೆಳೆದವು. ಜಿಲ್ಲಾಮಟ್ಟದಲ್ಲಿ ಪ್ರತೀ ಶೀರ್ಷಿಕೆಯಡಿ ಪ್ರಥಮ ಬಹುಮಾನ ಪಡೆದ 6 ಶಾಲೆಗಳ ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ ನ. 30 ರಂದು ಮೈಸೂರು ಡಯಟ್‌ದಲ್ಲಿ ಜರುಗುವ ರಾಜ್ಯಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next