Advertisement

ಲಾಳಗೊಂಡರ ಸಮಾಜಕ್ಕೆ ಮೀಸಲು ಕಲ್ಪಿಸಿ

01:16 PM Mar 10, 2022 | Team Udayavani |

ಸಿಂಧನೂರು: ರಾಜ್ಯದ ಜಾತಿ ಪಟ್ಟಿಯಲ್ಲಿ ಸೇರದೇ ಇರುವ ಲಾಳಗೊಂಡರ ಸಮಾಜವನ್ನು ಹಿಂದುಳಿದ ವರ್ಗ 3(ಬಿ)ಗೆ ಸೇರಿಸುವಂತೆ ಒತ್ತಾಯಿಸಿದ ನಿಯೋಗ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು. ತಮ್ಮ ಬೇಡಿಕೆ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ ನಿಯೋಗದ ಮುಖಂಡರು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Advertisement

ರಾಜ್ಯದಲ್ಲಿ ಲಾಳಗೊಂಡ ಸಮಾಜವು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ವೀರಶೈವ ಜನಾಂಗದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಲಾಳಗೊಂಡರನ್ನು ಜಾತಿ ಪಟ್ಟಿಯಲ್ಲಿ ಸೇರಿಸುವಂತೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿದೆ. ಈವರೆಗೂ ಸ್ಪಂದನೆ ದೊರಕಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ, ಬೇಡಿಕೆ ಈಡೇರಿಸಬೇಕು ಎಂದಿದ್ದಾರೆ.

ನಿಯೋಗದಲ್ಲಿ ಸಮಾಜದ ರಾಜ್ಯಾಧ್ಯಕ್ಷ ಹರವಿ ಬಸನಗೌಡ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಡಾ| ಶಿವರಾಜ್‌ ಪಾಟೀಲ್‌, ಬಸವರಾಜ ದಢೇಸುಗೂರು, ಸೋಮಲಿಂಗಪ್ಪ, ರಾಜಾವೆಂಕಟಪ್ಪ ನಾಯಕ, ಪರಣ್ಣ ಮುನವಳ್ಳಿ, ಸಿಂಧನೂರಿನ ಕೆ.ಶರಣಬಸವ ವಕೀಲರು, ಮಲ್ಲಿಕಾರ್ಜುನ ವಕೀಲರು, ಚಂದ್ರೇಗೌಡ ಹರೇಟನೂರು, ರಾಮನಗೌಡ ಮಲ್ಕಾಪುರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next