Advertisement

ಬಾಗಲಕೋಟೆ : ರಾಜ್ಯ ಸರ್ಕಾರ ಬೆಳಗಾವಿ ಲೋಕಸಭೆ ಹಾಗೂ ರಾಜ್ಯದ ವಿವಿಧ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕನ್ನಡಿಗರಿಗೆ ಅವಮಾನಿಸುವ ರೀತಿ ಕೆಲವು ನಿಗಮ ಮಂಡಳಿ ರಚನೆ ಮಾಡಿದ್ದು, ಸರ್ಕಾರ ಎಲ್ಲ ಜಾತಿ-ಜನಾಗಂಗಳನ್ನು  ಸಮಾನತೆ  ದೃಷ್ಠಿಯಿಂದ  ನೋಡುವುದಾದರೆ ಕೂಡಲೇ ಓಬಿಸಿ ಅಡಿ ಬರುವ 102 ಹಾಗೂ ಪ್ರವರ್ಗ 1ರಡಿ ಬರುವ 92 ಜಾತಿಗಳಿಗೂ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಅಧ್ಯಕ್ಷ, ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಒತ್ತಾಯಿಸಿದರು.

Advertisement

ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಬಿಸಿ ಅಡಿ 102 ಉಪ ಜಾತಿಗಳಿವೆ. ಪ್ರವರ್ಗ 1ರಡಿ 92 ಜಾತಿಗಳಿವೆ.
ಅಲ್ಲದೇ ಓಬಿಸಿ ಅಡಿ 29 ನೇಕಾರ ಉಪ ಜಾತಿಗಳಿವೆ. ನೇಕಾರ ಅಭಿವೃದ್ಧಿ ನಿಗಮ ಹಾಗೂ ಎಲ್ಲ ಉಪ ಜಾತಿಗಳಿಗೂ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು. ಈ ಕುರಿತು ಡಿ. 15ರೊಳಗಾಗಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮಕ್ಕೆ ವಾರ್ಷಿಕ 400 ಕೋಟಿ
ಅನುದಾನ ನೀಡುತ್ತಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ 80 ಕೋಟಿಗೆ ಇಳಿಸಲಾಗಿದೆ. ಹಿಂದುಳಿದವರಿಗೆ 320 ಕೋಟಿ ಅನುದಾನ ಕಡಿತಗೊಳಿಸಿ, ವಂಚಿಸಲಾಗಿದೆ. ಇದರಿಂದ ಇಡೀ ರಾಜ್ಯದ ಹಿಂದುಳಿದ ವರ್ಗಗಳು ತೀವ್ರ ಅಸಮಾಧಾನಗೊಂಡಿವೆ ಎಂದರು.

ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ 500 ಕೋಟಿ, ಮರಾಠಾ ಅಭಿವೃದ್ಧಿ ನಿಮಗಕ್ಕೆ 50 ಕೋಟಿ ಅನುದಾನ ನೀಡಲಾಗಿದೆ. ಈ
ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಅವಮಾನವಾಗುವ ರೀತಿ ಬೇರೆ ಸಮಾಜಕ್ಕೆ ನಿಗಮ ಮಾಡಿ, ಅನುದಾನ
ಕೊಡಲಾಗಿದೆ. ಆದರೆ, ಇಲ್ಲಿನ ಹಿಂದುಳಿದ ವರ್ಗಗಳಿಗೆ ಆದ್ಯತೆ ಕೊಟ್ಟಿಲ್ಲ. ಸರ್ಕಾರ ಹೀಗೆಯೇ ಜಾತಿ ಮಧ್ಯೆ ಒಡಕು ಮೂಡಿಸುವ ಕೆಲಸ
ಮಾಡುತ್ತಿದ್ದರೆ ಮುಂದೆ ತಮಿಳು, ತೆಲುಗು ಭಾಷಿಕರೂ ರಾಜ್ಯದಲ್ಲಿ ನಿಗಮಕ್ಕೆ ಒತ್ತಾಯ ಇಡುತ್ತಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next