Advertisement
ನ್ಯೂಸ್18 ನೆಟ್‌ವರ್ಕ್ ನಡೆಸಿರುವ ಸಮೀಕ್ಷೆ ಯಿಂದ ಈ ವಿಚಾರ ತಿಳಿದುಬಂದಿದೆ. 22 ರಾಜ್ಯಗಳ 2400ಕ್ಕೂ ಅಧಿಕ ಮಂದಿ ಯನ್ನು ಈ ಸಮೀಕ್ಷೆಯಲ್ಲಿ ಬಳಸಿಕೊಳ್ಳ ಲಾಗಿದೆ. ಹೊಸ ಕಾಯ್ದೆಗ ಳಿಂದಾಗಿ ರೈತರಿಗೆ ಅನು ಕೂಲವಾಗಲಿದೆ ಎಂದೇ ಅನೇಕರು ಅಭಿಪ್ರಾಯಪಟ್ಟಿದ್ದು, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರ ಮತ್ತು ತೆಲಂಗಾ ಣಗಳಂತಹ ಕೃಷಿ ಅವಲಂಬಿತ ರಾಜ್ಯಗಳಲ್ಲೂ ಕಾಯ್ದೆಗಳ ಪರ ಜನಾಭಿಪ್ರಾಯವಿರುವುದು ವಿಶೇಷ. ಆದರೆ ಪಂಜಾಬ್‌ನಲ್ಲಿ ಈ ಕಾಯ್ದೆಗಳಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಸೋಮವಾರ ದೇಶಾದ್ಯಂತ ಪ್ರತಿಭಟನ ಸ್ಥಳಗಳಲ್ಲಿ ರೈತರು ಒಂದು ದಿನದ ಉಪವಾಸ ಕೈಗೊಂಡಿದ್ದಾರೆ. ಜತೆಗೆ ಮುಂದಿನ ಸುತ್ತಿನ ಮಾತುಕತೆಗೆ ಸಂಬಂಧಿಸಿ ಸರಕಾರ ಬರೆದಿರುವ ಪತ್ರದಲ್ಲಿ ಹೊಸತೇನೂ ಇಲ್ಲ. ನಾವು ಮಾತುಕತೆಗೆ ಸದಾ ಸಿದ್ಧರಿದ್ದೇವೆ. ಆದರೆ, ಸರಕಾರ ನಮ್ಮ ಬೇಡಿಕೆಗೆ ತಕ್ಕಂತೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಹೇಳಿದ್ದಾರೆ. ಇದೇ ವೇಳೆ, ಕೃಷಿ ಕಾಯ್ದೆಗಳ ಕುರಿತು ಚರ್ಚಿಸಲು ಕೇರಳ ಸರಕಾರವು ಡಿ. 23ರಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದೆ. ರೈತರಿಂದ ರಕ್ತದಾನ: ಸಿಂಘು ಗಡಿಯಲ್ಲಿ ಎನ್‌ಜಿಒವೊಂದು ರಕ್ತದಾನ ಶಿಬಿರ ಏರ್ಪಡಿಸಿದ್ದು, ಪ್ರತಿಭಟನಾನಿರತ ಅನ್ನದಾತರು ಸಾಲುಗಟ್ಟಿ ಈ ಶಿಬಿರದಲ್ಲಿ ಪಾಲ್ಗೊಂಡರು. ಒಂದೇ ದಿನದಲ್ಲಿ 240 ರೈತರು ರಕ್ತದಾನ ಮಾಡಿದ್ದಾರೆ.
Related Articles
ರೈತರ ಪ್ರತಿಭಟನೆಗೆ ವಿದೇಶದಿಂದ ಹಣಕಾಸು ನೆರವು ಹರಿದುಬಂದಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಕೇಂದ್ರ ಸರಕಾರ ಈ ಕುರಿತು ವಿವರಣೆ ಕೋರಿದೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಎಂಬ ರೈತ ಸಂಘಟನೆಯು ಅನುಮತಿ ಇಲ್ಲದೇ 10 ಲಕ್ಷ ರೂ.ಗಳನ್ನು ವಿದೇಶದಿಂದ ಪಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಕೆಯು ಖಾತೆ ಹೊಂದಿರುವ ಪಂಜಾಬ್‌ನ ಬ್ಯಾಂಕ್‌ಗೆ ಫಾರೆಕ್ಸ್ ಇಲಾಖೆಯು ಇಮೇಲ್ ಕಳುಹಿಸಿ, ವಿದೇಶಿ ದೇಣಿಗೆಯ ನೋಂದಣಿ ವಿವರ ನೀಡುವಂತೆ ಸೂಚಿಸಿತ್ತು. ಈ ಬಗ್ಗೆ ಬ್ಯಾಂಕ್‌ನ ಅಧಿಕಾ ರಿಯು ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಿದ ಬಳಿಕ ವಿಚಾರ ಬಹಿರಂಗವಾಗಿತ್ತು.
Advertisement
ಎಷ್ಟು ರಾಜ್ಯಗಳಲ್ಲಿ ಸಮೀಕ್ಷೆ?-22ಎಷ್ಟು ಜನ ಭಾಗಿ-2400
ಕೃಷಿ ಕಾಯ್ದೆಗಳ ಪರ – 53.6%
ರೈತರು ಪ್ರತಿಭಟನೆ ವಾಪಸ್ ಪಡೆಯಬೇಕು ಎಂದವರು-56.59%
ಕೃಷಿಯ ಆಧುನೀಕರಣಕ್ಕೆ ಬೆಂಬಲ-73.05%
ಪ್ರತಿಭಟನೆ ರಾಜಕೀಯ ಪ್ರೇರಿತ-48.7%