Advertisement
ಹಣಕಾಸು ಮುಗ್ಗಟ್ಟಿನಿಂದ ಆ ದೇಶದ ಕಾಗದ ತಯಾರಿಕಾ ಉದ್ಯಮ ಅಕ್ಷರಶಃ ನಲುಗಿ ಹೋಗಿದೆ. ಅದರಿಂದಾಗಿ, ದೇಶ ದಲ್ಲಿ ಕಾಗದದ ಕೊರತೆ ಉಂಟಾಗಿದೆ. ಅದರ ಪರಿಣಾಮ, ಸ್ಥಳೀಯವಾಗಿ ಉತ್ಪಾ ದನೆಯಾಗುವ ಕಾಗದದ ಬೆಲೆಯೂ ಜಾಸ್ತಿಯಾಗಿದೆ.
ಅತಿಯಾದ ಹಣದುಬ್ಬರದಿಂದ ಪಾಕ್ ದಿವಾಳಿ ಯಂಚಿಗೆ ತಲುಪಿದೆ! ಇದನ್ನು ಸ್ವತಃ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ಒಪ್ಪಿಕೊಂಡಿದ್ದಾರೆ. ಇದನ್ನು ತಡೆಯಲಿಕ್ಕಾಗಿಯೇ ಅವರು ಉಕ್ಕು, ಸಿಮೆಂಟ್, ಆಟೋಮೊಬೈಲ್‌ನಂತಹ ಬೃಹತ್ ಉದ್ಯಮಗಳ ಮೇಲೆ ಶೇ.10 ಸೂಪರ್ ಟ್ಯಾಕ್ಸ್ ವಿಧಿಸಿದ್ದಾರೆ. ಅಷ್ಟು ಮಾತ್ರವಲ್ಲ ಗರಿಷ್ಠ ಆದಾಯ ಹೊಂದಿರುವ ವ್ಯಕ್ತಿಗಳ ಮೇಲೂ ಬಡತನ ನಿರ್ಮೂಲನೆ ತೆರಿಗೆ ವಿಧಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಷರೀಫ್, ನಮ್ಮ ಮೊದಲ ಉದ್ದೇಶ ಜನರಿಗೆ ನಿರಾಳತೆ ನೀಡುವುದು, ಹಣದುಬ್ಬರದ ಹೊರೆ ಇಳಿಸುವುದು. ನಂತರದ ಉದ್ದೇಶ, ದೇಶ ದಿವಾಳಿ ಯಾಗುವುದನ್ನು ತಡೆಯುವುದು ಎಂದಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಹಿಂದಿನ ಸರಕಾರಮಾಡಿರುವ ಭ್ರಷ್ಟಾಚಾರ ದೇಶಕ್ಕೆ ತೀವ್ರವಾಗಿ ತಟ್ಟಿದೆ ಎಂದೂ ಆರೋಪಿಸಿದ್ದಾರೆ.