Advertisement

ಮಧುರೈ ಮೀನಾಕ್ಷಿ ದೇಗುಲದಲ್ಲಿ ಭಾರಿ ಬೆಂಕಿ: 30 ಅಂಗಡಿ ಭಸ್ಮ

09:16 AM Feb 03, 2018 | Team Udayavani |

ಮಧುರೈ: ಇತಿಸಾಸ ಪ್ರಸಿದ್ಧ ಮಧುರೈ ಮೀನಾಕ್ಷಿ ದೇಗುಲದ ಪ್ರಾಂಗಣದಲ್ಲಿ ಶುಕ್ರವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು 30 ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿದೆ.

Advertisement

ಗೊಂಬೆಗಳ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು ಬಳಿಕ ಕೆನ್ನಾಲಗೆ  ದೇಗುಲದ ಸಾವಿರ ಕಂಬದ ಕೋಣೆ ಮತ್ತು ಪೂರ್ವ ಗೋಪುರದವರಗೆ  ವ್ಯಾಪಿಸಿದೆ . 

60ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬಂದಿಗಳು ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಬೆಂಕಿ ದೇಗುಲದ ಗರ್ಭಗುಡಿಗೆ ವ್ಯಾಪಿಸುವ ಮುನ್ನ ನಿಯಂತ್ರಣಕ್ಕೆ ತರಲಾಯಿತು. 

ಅದೃಷ್ಟವಷಾತ್‌ ಯಾವುದೇ ವ್ಯಕ್ತಿಗೆ ಗಾಯವಾಗಲಿ, ಪ್ರಾಣಾಹಾನಿಯಾಗಲಿ ಸಂಭವಿಸಿಲ್ಲ. 

ಅವಘಡದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next