Advertisement

ಮೇಜರ್‌ ಆದಿತ್ಯ ಕುಮಾರ್‌, ಔರಂಗಜೇಬ್‌ಗೆ ಶೌರ್ಯ ಚಕ್ರ ಪ್ರಶಸ್ತಿ

06:29 PM Aug 14, 2018 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟು  ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ  ಅಪ್ರತಿಮ ಧೈರ್ಯ ಶೌರ್ಯ ತೋರಿರುವ ಮೇಜರ್‌ ಆದಿತ್ಯ ಕುಮಾರ್‌ ಮತ್ತು ರೈಫ‌ಲ್‌ ಮ್ಯಾನ್‌ ಔರಂಗಜೇಬ್‌ (ಮರಣೋತ್ತರ) ಅವರಿಗೆ  ಈ ವರ್ಷದ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗುವುದು.

Advertisement

ಮೇಜರ್‌ ಆದಿತ್ಯಕುಮಾರ್‌ ಅವರು 10 ಗಢವಾಲ್‌ ರೈಫ‌ಲ್‌ ದಳಕ್ಕೆ ಸೇರಿದವರು. ಇವರ ಸೇನಾ ದಳವು ಈ ವರ್ಷ ಜನವರಿ 27ರಂದು ಶೋಪಿಯಾನ್‌ ಜಿಲ್ಲೆಯಲ್ಲಿ  ತಮ್ಮ ಮೇಲೆ ಕಲ್ಲೆಸೆದವರ ಮೇಲೆ ಫೈರಿಂಗ್‌ ನಡೆಸಿದಾಗ ಮೂವರು ಪೌರರು ಅಸುನೀಗಿದ್ದರು. ಆ ಕಾರಣಕ್ಕೆ ಮೇಜರ್‌ ಆದಿತ್ಯ ಕುಮಾರ್‌ ಅವರ ಸೇನಾದಳ ವಿವಾದಕ್ಕೆ ಗುರಿಯಾಗಿತ್ತು.

ರೈಫ‌ಲ್‌ ಮ್ಯಾನ್‌ ಔರಂಗಜೇಬ್‌ ಅವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಭಾರೀ ಶಸ್ತ್ರ ಸಜ್ಜಿತ ಉಗ್ರರು ಅವರನ್ನು ಗನ್‌ ಪಾಯಿಂಟ್‌ನಲ್ಲಿ ಅಪಹರಿಸಿ ಗುಂಡಿನ ಸುರಿಮಳೆಗೈದು ಅವರನ್ನು ಬರ್ಬರವಾಗಿ ಕೊಂದಿದ್ದರು.

ಔರಂಗಜೇಬ್‌ ಅವರು ಜಮ್ಮು ಕಾಶ್ಮೀರ ನಾಲ್ಕನೇ ಲೈಟ್‌ ಇನ್‌ಫ್ಯಾಂಟ್ರಿಗೆ ಸೇರಿದವರು. ಇವರನ್ನು ಶೋಪಿಯಾನ್‌ನ ಶಾದಿಮಾರ್ಗ್‌ನಲ್ಲಿರುವ 44ನೇ ರಾಷ್ಟ್ರೀಯ ರೈಫ‌ಲ್ಸ್‌ ದಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇವರು ಮೇಜರ್‌ ರೋಹಿತ್‌ ಶುಕ್ಲಾ ತಂಡದ ಭಾಗವಾಗಿದ್ದರು. ಇವರ ತಂಡ ಅತ್ಯುನ್ನತ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಮೀರ್‌ ಟೈಗರ್‌ನನ್ನು ಎನ್‌ಕೌಂಟರ್‌ನಲ್ಲಿ ಮಟಾಶ್‌ ಮಾಡಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next