Advertisement
ಉಸಿರಾಟದ ವ್ಯಾಯಾಮದಿಂದ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ತಿಳಿಯಬಹುದು. ಉಸಿ ರಾಟದ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಅಧಿಕವಾಗುವುದು. ಆರೋಗ್ಯಕರವಾಗಿರುವವರು, ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರು ಈ ವ್ಯಾಯಾಮದ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುವುದು.
*ಬೆನ್ನು ನೇರ ಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳಿ.
*ಕೈಗಳ ಬೆರಳುಗಳನ್ನು ಜ್ಞಾನ ಮುದ್ರೆಯಲ್ಲಿ ಇರಿಸಿ ತೊಡೆಯ ಮೇಲೆ ಇಡಿ. *ಉಸಿರನ್ನು ಮೂಗಿನ ಮೂಲಕ ನಿಧಾನಕ್ಕೆ ಎಳೆದು ಸ್ವಲ್ಪ ಹೊತ್ತು ತಡೆ ಹಿಡಿದು ಅನಂತರ ಬಾಯಿಯ ಮುಖಾಂತರ ಬಿಡಿ. ಈ ರೀತಿ ಐದು ಬಾರಿ ಮಾಡಿ.
Related Articles
Advertisement
*ಉಸಿರನ್ನು ಸ್ವಲ್ಪ ಹೊತ್ತು ತಡೆ ಹಿಡಿದು ನಿಧಾನಕ್ಕೆ ಮೂಗಿನ ಮುಖಾಂತರ ಬಿಡಿ.
ಈ ವ್ಯಾಯಾಮವನ್ನು ನಿತ್ಯವೂ ಮಾಡುತ್ತಿದ್ದರೆ ಉಸಿರನ್ನು ಬಿಗಿ ಹಿಡಿಯುವ ಸಾಮರ್ಥ್ಯ ಹೆಚ್ಚಾ ಗುವುದು. 25 ಸೆಕೆಂಡ್ ಗಿಂತಲೂ ಅಧಿಕ ಸಮಯ ಉಸಿ ರನ್ನು ಬಿಗಿ ಹಿಡಿಯಲು ಸಾಧ್ಯವಾದರೆ ನಿಮ್ಮ ಶ್ವಾಸಕೋಶ ಸುರಕ್ಷಿತವಾಗಿದೆ ಎಂದರ್ಥ.
ಆರೋಗ್ಯವಂತರೂ ನಿತ್ಯವೂ ಈ ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಯನ್ನು ವೃದ್ಧಿಸಿಕೊಳ್ಳಬಹುದು. ನಿತ್ಯವೂ ಅರ್ಧ ಗಂಟೆ ಇದಕ್ಕಾಗಿ ಮೀಸಲಿಡಬಹುದು.