Advertisement

ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ: ಮನಗೂಳಿ

05:00 PM Feb 22, 2022 | Shwetha M |

ಸಿಂದಗಿ: ಗ್ರಾಮೀಣ ಮತ್ತು ನಗರ ಜನತೆ ಆರೋಗ್ಯ ಜಾಗೃತಿಗೆ ಆರೋಗ್ಯ ತಪಾಸಾಣೆ ಶಿಬಿರಗಳು ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದು ಮನಗೂಳಿ ಆಸ್ಪತ್ರೆಯ ವೈದ್ಯ ಡಾ| ಶಾಂತವೀರ ಮನಗೂಳಿ ಹೇಳಿದರು.

Advertisement

ಪಟ್ಟಣದ ಟಿಎಸ್‌ಪಿ ಮಂಡಳಿಯ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು, ಮನಗೂಳಿ ಆಸ್ಪತ್ರೆ, ಎಂ.ಸಿ. ಮನಗೂಳಿ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ, ನರರೋಗ, ಕ್ಯಾನ್ಸರ್‌, ಮೂತ್ರ ಪಿಂಡದ ಕಲ್ಲು ಕಾಯಿಲೆ ಸೇರಿದಂತೆ ಅನೇಕ ರೋಗಗಳ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉಚಿತ ಆರೋಗ್ಯತ ಪಾಸಣಾ ಶಿಬಿರಗಳು ಬಡವರಿಗೆ, ಮಧ್ಯಮ ವರ್ಗದ ಜನತೆಗೆ ವರದಾನವಾಗಿವೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೋಬ್ಬರೂ ಮೊದಲು ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊಂದಿರಬೇಕು. ಮುಂಬರುವ ದಿನಗಳಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಹೃದಯರೋಗ ತತn ವೈದ್ಯ ಡಾ| ಹನುಮಂತಯ್ಯ ಮಾತನಾಡಿ, ಆರೋಗ್ಯದಿಂದ ಇದ್ದಲ್ಲಿ ನಾವೆಲ್ಲವನ್ನು ಸಾಧಿಸಬಹುದು. ಇಂದು ನಾವೆಲ್ಲ ಸೇವಿಸುವ ಆಹಾರ ಪದ್ದತಿ ಬದಲಾಗಿದೆ. ಅದರಲ್ಲಿಯೂ ನಾವು ಸೇವಿಸುವ ಆಹಾರ ಸತ್ವಯುತವಾಗಿಲ್ಲ. ಇದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಜೀವಸತ್ವ, ಪ್ರೋಟಿನ್‌ಗಳು ಸಿಗುತ್ತಿಲ್ಲ. ಇದರಿಂದ ದೇಹ ನಿತ್ಯ ಬದಲಾಗುತ್ತ ಸಾಗುತ್ತದೆ. ಆರೋಗ್ಯದ ವಿಚಾರದಲ್ಲಿ ನಾವು ಎಚ್ಚರವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ವಿಚಾರವಾಗಿದೆ ಎಂದು ಮಾಹಿತಿ ನೀಡಿದರು.

ಈ ಉಚಿತ ಆರೋಗ್ಯ ಶಿಬಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 300ಕ್ಕೂ ಅಧಿಕ ಜನರಿಗೆ ವಿವಿಧ ರೋಗಗಳ ತಪಾಸಣೆ ಮಾಡಲಾಯಿತು. ಇವರಲ್ಲಿ 22 ರೋಗಿಗಳು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗೆ ಸಂಬಂಧಿಸಿದ ಉಚಿತ ಶಸ್ತ್ರಚಿಕಿತ್ಸೆ ಪಡೆಯಲಿದ್ದಾರೆ. ಶಿಬಿರದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯುಳ್ಳವರು, ಇಸಿಜಿ, ಇಕೋ ಸ್ಕ್ಯಾನಿಂಗ್‌, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರ ವಿಸರ್ಜನೆ ವೇಳೆ ಉರಿ, ರಕ್ತ, ಬೆನ್ನು ನೋವು, ಕುತ್ತಿಗೆ ನೋವು, ಮೆದುಳಿನ ಗಡ್ಡಿ, ಸ್ತ್ರೀ ರೋಗ ಸಮಸ್ಯೆ, ಗರ್ಭಕೊಶದ ಉಚಿರ ಶಸ್ತ್ರ ಚಿಕಿತ್ಸೆ, ಕೀಲು ಮತ್ತು ಮೂಳೆ, ಕಿವಿ ಗಂಟಲು, ಥೈರಾಯ್ಡ್ ಶಸ್ತ್ರ ಚಿಕಿತ್ಸೆ ಸೇರಿದಂತೆ ಅನೇಕ ರೋಗಗಳಿಗೆ ಉಚಿತತಪಾಸಾಣೆ ಮಾಡಲಾಯಿತು.

Advertisement

ಶಿಬಿರದಲ್ಲಿ ಮನಗೂಳಿ ಆಸ್ಪತ್ರೆಯ ಡಾ| ಸಂಧ್ಯಾ ಮನಗೂಳಿ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಡಾ| ಅರವಿಂದ, ಡಾ|ಗುರುಪ್ರಸಾದ.ಜಿ., ಡಾ| ಟೀನಾ, ಡಾ| ಸಂಧ್ಯಾ, ಡಾ| ವಿಶ್ವನಾಥರೆಡ್ಡಿ ಮತ್ತು ಕುಮಾರ ಬಗಲಿ, ಪೀರಾ ಮಗರಬಿ, ಶ್ರೀಶೈಲ ಅಂಬಲಗಿ, ಬಸವರಾಜ, ಮೀನಾಕ್ಷಿ ನಾಯೊRàಡಿ, ಚನ್ನು ರಾಯಚೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next