Advertisement

ಉತ್ತಮ ಆಡಳಿತ ನಡೆಸಿ ಜನಸೇವೆ ಮಾಡಿ

09:41 PM Oct 22, 2019 | Lakshmi GovindaRaju |

ಚಾಮರಾಜನಗರ: ಗ್ರಾಪಂಯ ಚುನಾಯಿತ ಮಹಿಳಾ ಸದಸ್ಯರು ತಮಗಿರುವ ಸಂವಿಧಾನಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ಆರ್ಗನೈಸೇಷನ್‌ ಫಾರ್‌ ದ ಡೆವಲಪ್‌ಮೆಂಟ್‌ ಆಫ್ ಪೀಪಲ್‌ (ಒಡಿಪಿ) ಮೈಸೂರು ಮತ್ತು ದ ಹಂಗರ್‌ ಪ್ರೊಜೆಕ್ಟ್ ಭಾರತ ಇವರ ಸಹಯೋಗದೊಂದಿಗೆ ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಗ್ರಾಪಂ ಚುನಾಯಿತ ಮಹಿಳಾ ಸದಸ್ಯರಿಗೆ ಏರ್ಪಡಿಸಿದ ತಾಲೂಕು ಮತ್ತು ಜಿಲ್ಲಾ ಮಟ್ಟದ ಜನಪ್ರತಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಗ್ರಾಪಂ ಚುನಾಯಿತ ಮಹಿಳಾ ಸದಸ್ಯರಿಗೆ ಉತ್ತಮ ಆಡಳಿತ ಹಾಗೂ ಅವರಿಗಿರುವ ಹಕ್ಕು ಮತ್ತು ಕರ್ತವ್ಯಗಳು, ಸರ್ಕಾರದಿಂದ ದೊರೆಯುವ ಸವಲತ್ತುಗಳ ಕುರಿತು ಆರ್ಗನೈಜೇಷನ್‌ ಫಾರ್‌ ದ ಡೆವಲಪ್‌ಮೆಂಟ್‌ ಆಫ್ ಪೀಪಲ್‌ (ಒಡಿಪಿ) ಮೈಸೂರು ಮತ್ತು ದ ಹಂಗರ್‌ ಪ್ರೊಜೆಕ್ಟ್ ಭಾರತ ಇವರ ಸಹಯೋಗದೊಂದಿಗೆ ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಕರ್ನಾಟಕ ತರಬೇತಿ ಕೊಡುತ್ತಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ.

ಇಂಥ ತರಬೇತಿ ಕಾರ್ಯಕ್ರಮವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಂಡು ಗ್ರಾಪಂಯಲ್ಲಿ ಉತ್ತಮ ಆಡಳಿತ ನಡೆಸಿ ಜನಸೇವೆ ಮಾಡಬೇಕು ಎಂದು ಸಲಹೆ ನೀಡಿದರು. ಗ್ರಾಪಂಯಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಬಹುದು. ಬಹಳ ಪ್ರಾಮಾಣಿಕವಾಗಿ, ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಉತ್ತಮ ಜನಪ್ರತಿನಿಧಿಯಾಗಿ ಮುಂದಿನ ಚುನಾವಣೆಗಳಲ್ಲಿ ಸುಲಭವಾಗಿ ಆಯ್ಕೆಯಾಗಬಹುದು ಎಂದರು.

ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಶಾಸಕರ ಗಮನಕ್ಕೆ ತರಬೇಕು. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಮ್ಮ ಗಮನಕ್ಕೆ ತಂದರೆ ಪರಿಹರಿಸಿಕೊಡುತ್ತೇನೆ. ತಮ್ಮ ಮನವಿಯಂತೆ ಚಾಮರಾಜನಗರದಲ್ಲಿ ಮಹಿಳಾ ಭವನ ನಿರ್ಮಾಣಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ತಾಲೂಕು ಮಟ್ಟದಲ್ಲಿ ಮಹಿಳಾ ಭವನ ನಿರ್ಮಾಣ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಹಿಳಾ ಪೊಲೀಸ್‌ ಠಾಣೆ ತೆರೆಯುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸುಗ್ರಾಮ ಗ್ರಾಪಂ ಮಹಿಳಾ ಪ್ರತಿನಿಧಿಗಳ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ತಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ, ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್‌, ಸುಗ್ರಾಮ ಅಧ್ಯಕ್ಷೆ ಪದ್ಮಾ, ಉಪಾಧ್ಯಕ್ಷ ಕುಮಾರಿ, ಖಜಾಂಚಿ ಜ್ಯೋತಿ, ನಿರ್ದೇಶಕರಾದ ರಾಜೇಶ್ವರಿ, ಪುಟ್ಟನಂಜಮ್ಮ, ಒಡಿಪಿ ಸಂಸ್ಥೆ ಸಂಯೋಜಕ ಜಿ.ಅಶೋಕ್‌ಕುಮಾರ್‌, ಕಾರ್ಯಕರ್ತೆಯರಾದ ಭಾಗ್ಯಲಕ್ಷ್ಮಿ, ಸುಶೀಲಾ ಹಾಗೂ 18 ಗ್ರಾಪಂಗಳ 60 ಮಹಿಳಾ ಸದಸ್ಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next