Advertisement

ನನ್ನೊಂದಿಗೆ 130 ಕೋಟಿ ಭಾರತೀಯರು ಪ್ರಮಾಣವಚನ ಸ್ವೀಕರಿಸುತ್ತಾರೆ

09:15 AM Apr 01, 2019 | Team Udayavani |

ಹೊಸದಿಲ್ಲಿ : ಚುನಾವಣೆ ಬಳಿಕ ನನ್ನೊಂದಿಗೆ 130 ಕೋಟಿ ಭಾರತೀಯರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

Advertisement

ದೆಹಲಿಯ ತಾಲ್‌ಕಟೋರಾ ಮೈದಾನದಲ್ಲಿ ನಡೆದ ಮೈ ಭೀ ಚೌಕೀದಾರ್‌ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದಾರೆ.

ಚೌಕಿದಾರ್‌ನಾಗಿ ನಾನು ನನ್ನ ಕೆಲಸ ಮುಂದುವರಿಸುತ್ತೇನೆ. ಚೌಕೀದಾರ್‌ ಕುರಿತಾಗಿನ ಸ್ಫೂರ್ತಿ ಹೆಚ್ಚುತ್ತಿರುವುದು ನನಗೆ ಸಂತಸ ಸಂತಿದೆ. ನಾನು ದೇಶಾದ್ಯಂತ ಇರುವ ಚೌಕೀದಾರ್‌ಗಳಿಗೆ ನನ್ನ ಶುಭ ಕೋರುತ್ತೇನೆ ಎಂದರು.

2014 ರಲ್ಲಿ ಬಹಳಷ್ಟು ಜನ ನನ್ನ ಕುರಿತಾಗಿ ವ್ಯಾಪಕ ಟೀಕೆ ಮಾಡಿದರು.ಅದೇ ನನಗೆ ಪ್ರಚಾರಕ್ಕೆ ವರದಾನವಾಯಿತು ಎಂದರು.

ಚುನಾವಣೆಗಳು ನನ್ನ ಆಧ್ಯತೆ ಅಲ್ಲ. ನನಗೆ ದೇಶವೇ ಮುಖ್ಯ ಎಂದರು.

Advertisement

ನನಗೆ ನಮ್ಮ ಸೇನೆಯ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

ಯಾರು ದೇಶವನ್ನು ಲೂಟಿ ಮಾಡಿದ್ದಾರೆ ಅವರು ಬೆಲೆ ತೆರಲೇಬೇಕಾಗಿದೆ.

2014ರಿಂದ ನಾನು ಲೂಟಿಕೋರರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದೇನೆ.

ಉಗ್ರವಾದ ಎಲ್ಲಿಂದ ಹುಟ್ಟುತ್ತಿದೆಯೋ ಅಲ್ಲಿಂದಲೇ ನಿರ್ಮೂಲನೆ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next