Advertisement

ಮಹೀಂದ್ರಾ ನಿನ್ನ ಮಹಿಮೆ ಅಪಾರ

06:00 AM Dec 17, 2018 | |

ಮಹೀಂದ್ರಾ ಭಾರತದಲ್ಲಿ ದೊಡ್ಡ ಮಾದರಿಯ ಎಸ್‌ಯು ವಾಹನ ಪರಿಚಯಿಸಿದ್ದು ಇದೇ ಮೊದಲು. ಆದರೆ ಸಹೋದರ ಕಂಪನಿ ಸನ್‌ಗ್ಯೋಂಗ್‌ ನೆರವಿನಿಂದ ಈ ಕಾರನ್ನು ಪರಿಚಯಿಸಲಾಗಿದೆ. ಇದರಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಇದು ನಾಲ್ಕನೇ ತಲೆಮಾರಿನ ರೆಕ್ಸ್‌ಟಾನ್‌ ಕಾರ್‌ ಆಗಿದೆ.  

Advertisement

ಲೈಫ‌ು ಲಕ್ಸುರಿಯಾಗಿರಬೇಕು ಎನ್ನುವುದು ಎಲ್ಲರ ಆಸೆ. ತಪ್ಪೇನಿಲ್ಲ. ವಾಹನಗಳೂ ಲಕ್ಸುರಿಯಾದಷ್ಟೂ ಖುಷಿ ಹೆಚ್ಚು. ಅವುಗಳ ಖರೀದಿಯೂ ಇದೀಗ ಹೆಚ್ಚುತ್ತಿದೆ. ಇಂಥ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡೇ ಮಹೀಂದ್ರಾ ಕಂಪೆನಿ, ಆಲ್ಟರಸ್‌ ಜಿ4 ಹೆಸರಿನ ಹೊಸ ಮಾದರಿಯ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. 

ಮಹೀಂದ್ರಾ ಭಾರತದ, ಕಾರು ಮಾರಾಟ ಕ್ಷೇತ್ರದಲ್ಲಿ ಶೇ.7.5ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಗರಿಷ್ಠ ಸಂಖ್ಯೆಯಲ್ಲಿ ಬೊಲೆರೋಗಳನ್ನು ಮಾರಾಟ ಮಾಡುತ್ತಿದೆ. ಭಾರತೀಯರ ಪಾಲಿಗೆ 4-4 ಎಂದರೆ ಥಟ್ಟನೆ ನೆನಪಿಗೆ ಬರುವುದು ಮಹೀಂದ್ರಾ. ಜೀಪ್‌ಗ್ಳ ಮೂಲಕ ಮಾರುಕಟ್ಟೆಯಲ್ಲಿ ಪಾರಮ್ಯ ಹೊಂದಿದ ಮಹೀಂದ್ರಾ, ಆರ್ಮಡಾ ಮಾದರಿಯ ಮೂಲಕ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಿತ್ತು. ಸದ್ಯ ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋಗಳು ಮಾರಾಟವಾಗುತ್ತಿವೆ. ಇದರ ಮುಂದುವರಿದ ಭಾಗವಾಗಿ ಹೆಚ್ಚಿನ ಸಾಮರ್ಥ್ಯದ, ಪ್ರೀಮಿಯಂ ಎಸ್‌ಯುವಿ ಮಾರುಕಟ್ಟೆಗೆ ಮಹೀಂದ್ರಾ ಪ್ರವೇಶಿಸಲು ಉದ್ದೇಶಿಸಿದ್ದು, ತನ್ನದೇ ಸಹೋದರ ಸಂಸ್ಥೆಯಾದ ದ.ಕೊರಿಯಾದ ಸ್ಯಾನ್‌ಗ್ಯೋಂಗ್‌ ಕಂಪೆನಿಯ ರೆಕ್ಸ್‌ಟನ್‌ ಅನ್ನು ಮಾರುಕಟ್ಟೆಗೆ ಈ ಹಿಂದೆ ಬಿಟ್ಟಿತ್ತು. ಆದರೆ ಮಹೀಂದ್ರಾ ಹೆಸರಿನಲ್ಲಿ ಈ ಎಸ್‌ಯುವಿ ಇಲ್ಲದ ಕಾರಣ ಅಷ್ಟಾಗಿ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಲಿಲ್ಲ.  ಇದೀಗ, ಮಹೀಂದ್ರಾ ರೆಕ್ಸ್‌ಟನ ಸುಧಾರಿತ ಆವೃತ್ತಿಯನ್ನೇ ಮಹೀಂದ್ರಾ ಹೆಸರಿನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದರ ಹೆಸರು ಸ್ಯಾನ್‌ಗ್ಯೋಂಗ್‌ 4*4 ಎಂದಿದೆ.

ವಿನ್ಯಾಸ
ದೊಡ್ಡ ಮಾದರಿ ಎಸ್‌ಯು ವಾಹನವನ್ನು ಮಹೀಂದ್ರಾ ಕಂಪನಿ ಭಾರತದಲ್ಲಿ ಪರಿಚಯಿಸಿದ್ದು ಇದೇ ಮೊದಲು. ಆದರೆ ಸಹೋದರ ಕಂಪನಿ ಸನ್‌ಗ್ಯೋಂಗ್‌ ನೆರವಿನಿಂದ ಈ ಕಾರನ್ನು ಪರಿಚಯಿಸಲಾಗಿದ್ದು ಇದರಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಇದು ನಾಲ್ಕನೇ ತಲೆಮಾರಿನ ರೆಕ್ಸ್‌ಟಾನ್‌ ಕಾರ್‌ ಆಗಿದೆ.  ಬಹುತೇಕ ಇದರಲ್ಲಿ ಸನ್‌ಗ್ಯೋಂಗ್‌ನ ಬ್ಯಾಡ್ಜ್ ಮಾತ್ರ ಬದಲಾಗಿದೆ. ಉಳಿದಂತೆ ಇದರ ಉದ್ದ 4850 ಎಂ.ಎಂ. ಮತ್ತು ಅಗಲ 1960 ಎಂ.ಎಂ. ಮತ್ತು ಎತ್ತರ 1845 ಎಂ.ಎಂ. ಇದ್ದುದೊಡ್ಡಕಾರಿನ ಫೀಲ್‌ ನೀಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿರುವ ಫೋರ್ಡ್‌ ಎಂಡೆವರ್‌ ಮತ್ತು ಟೊಯೊಟಾ ಫಾರ್ಚೂನರ್‌ಗೆ ಸಡ್ಡು ಹೊಡೆಯಲೆಂದೇ ಮಹೀಂದ್ರಾ ಈ ಕಾರನ್ನು ಮಾರಕಟ್ಟೆಗೆ ತಂದಿದೆ ಎಂಬ ಮಾತುಗಳೂ ಇವೆ. ಈ ವಾಹನದ ಬಹುತೇಕತಾಂತ್ರಿಕ ಅಂಶಗಳು ಸ್ಪರ್ಧಾತ್ಮಕವಾಗಿವೆ. ರಸ್ತೆಯಲ್ಲಿ ಈ ಕಾರು ಸಾಗುತ್ತಿದ್ದರೆ, ಥಟ್ಟನೆ ಕಣ್ಣಿಗೆ ಬೀಳದೇ ಇರದು. ಪ್ರಕಾಶಮಾನವಾದ ಹೆಡ್‌ಲ್ಯಾಂಪ್‌ಗ್ಳು, ಕಾರು ಬಲಿಷ್ಠವಿದೆ ಎಂದು ತೋರಿಸುವಂತೆ ವಿನ್ಯಾಸ ಮಾಡಲಾಗಿದೆ.  20 ಇಂಚಿನದೊಡ್ಡ ಅಲಾಯ್‌ ವೀಲ್‌ಗ‌ಳು ಇದರ ಪ್ಲಸ್‌ ಪಾಯಿಂಟ್‌. ಹಾಗೆಯೇ, ಒಳಭಾಗದಲ್ಲಿ ಲೆದರ್‌ ಸೀಟುಗಳು, ಪ್ರತಿಯೊಂದು ಸೀಟ್‌ಗೂ ಎಸಿ ವೆಂಟ್‌ಗಳು, ಹಿಂಭಾಗದಲ್ಲಿ ಸಾಕಷ್ಟು ಸ್ಥಳಾವಕಾಶ, ಸೀಟುಗಳನ್ನು ಸಂಪೂರ್ಣವಾಗಿ ಮಡಚಿ ಸಾಮಗ್ರಿಗಳನ್ನು ಇಡಲು ಅವಕಾಶವಿದೆ. ಹಿಂಭಾಗದ ಎರಡೂ ಸಾಲಿನ ಸೀಟುಗಳಲ್ಲಿ ಪ್ರಯಾಣಿಕರು ಕೂತಿದ್ದರೂ ಡಿಕ್ಕಿಯಲ್ಲಿ ಸುಮಾರು 60 ಕೆ.ಜಿಯಷ್ಟು ಸರಂಜಾಮುಗಳನ್ನು ಇಡಲು ಅನುಕೂಲವಿದೆ. 

ಸೂಪರ್‌ ಲಕ್ಸುರಿ ಫೀಚರ್
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಎಸ್‌ಯುಗಳಲ್ಲಿ ಸೂಪರ್‌ ಲಕ್ಸುರಿ ಫೀಚರ್ಇರುವ ಏಕೈಕ ಎಸ್‌ಯು ಇದು. ಆಲ್ಟರಸ್‌ ಜಿ4ನಲ್ಲಿ ಒಟ್ಟು 9 ಏರ್‌ಬ್ಯಾಗ್‌ಗಳಿವೆ. 360 ಡಿಗ್ರಿ ಸರೌಂಡ್‌ ಕ್ಯಾಮೆರಾ, ಡ್ರೆçವರ್‌ ಸೀಟ್‌ಗೆ ಎಲೆಕ್ಟ್ರಾನಿಕ್‌ ಅಡ್ಜಸ್ಟ್‌ಮೆಂಟ್‌ ವ್ಯವಸ್ಥೆ, ಎಲ್‌ಇಡಿಕಾರ್ನರಿಂಗ್‌, 7 ಇಂಚಿನ ಟಚ್‌ಸ್ಕ್ರೀನ್‌ ಹೊಂದಿದ ಮನರಂಜನಾ ವ್ಯವಸ್ಥೆ, ಆಂಡ್ರಾಯಿಡ್‌ಕನೆಕ್ಷನ್‌ ವ್ಯವಸ್ಥೆ, ಟಯರ್‌ನ ಗಾಳಿ ಒತ್ತಡ ತಿಳಿಸುವ ವ್ಯವಸ್ಥೆ, ಕಾರಿನ ಹೊರಗೆ ನಿಂತಿದ್ದರೂ ಸಾಕು, ಸುಲಭವಾಗಿ ತೆರೆಯುವ ಡಿಕ್ಕಿಡೋರ್‌, ವಾತಾವರಣಕ್ಕೆ ಅನ್ವಯವಾಗುವಂತೆ ತನ್ನಿಂದತಾನಾಗಿಯೇ ಹೊಂದಿಕೊಳ್ಳುವ ವ್ಯವಸ್ಥೆ, ಮಳೆ ಬರುವಿಕೆ ಗಮನಿಸಿ ಚಾಲೂಗೊಳ್ಳುವ ವೈಪರ್‌ಗಳು, ಸ್ಟಾರ್ಟ್‌ ಪುಷ್‌ ಬಟನ್‌, ಬಹು ವಿಧದ ಸ್ಟೀರಿಂಗ್‌ನಲ್ಲೇ ಇರುವ ನಿಯಂತ್ರಕಗಳು ಕಾರನ್ನು ಸೂಪರ್‌ ಲಕ್ಸುರಿಯನ್ನಾಗಿ ಮಾಡಿವೆ. 

Advertisement

ಭಾರೀ ಪವರ್‌!
ಮಹೀಂದ್ರಾದ ಎಲ್ಲ ವಾಹನಗಳು ಸಾಕಷ್ಟು ಪವರ್‌ಫ‌ುಲ್‌. ಅದರಲ್ಲೂ ಕಚ್ಚಾ ರಸ್ತೆಗಳಲ್ಲಿ ನಿರಾಯಾಸವಾಗಿ ಸಾಗಬಲ್ಲ ಮಾದರಿಯವು. ಆಲ್ಟರಸ್‌ ಜಿ 4 ಕೂಡ ಇದೇ ರೀತಿ ಇದೆ. ಸದ್ಯ ಮಹೀಂದ್ರಾದ ಎಲ್ಲ  ವಾಹನಗಳಿಗಿಂತ ಇದೇ ಪವರ್‌ಫ‌ುಲ್‌ಕಾರು. 2.2 ಲೀಟರ್‌ನ 4 ಸಿಲಿಂಡರ್‌ನ ಡೀಸೆಲ್‌ಎಂಜಿನ್‌ ಅನು °ಇದು ಹೊಂದಿದ್ದು 180 ಅಶ್ವಶಕ್ತಿ ಮತ್ತು 420 ಎನ್‌.ಎಂ. ಟಾರ್ಕ್‌ (ಎಳೆಯುವ ಶಕ್ತಿ)ಯನ್ನು ಹೊಂದಿದೆ. ಇದರಲ್ಲಿ 7 ಸ್ಪೀಡ್‌ ಅಟೋಮ್ಯಾಟಿಕ್‌ಗಿಯರ್‌ ಬಾಕ್ಸ್‌ಇದ್ದು ಇದು ಬೆಂಝ್ತಯಾರಿಕೆಯದ್ದಾಗಿದೆ. ಇಷ್ಟೊಂದು ಶಕ್ತಿ ಇರುವಕಾರಿನಗಿಯರನ್ನು ಹಾಕಿದರೆಸಾಕು ಎಕ್ಸಿಲರೇಟರ್‌ ಅದುಮದೇ ತನ್ನಿಂದ ತಾನಾಗಿಯೇ ಮುಂದಕ್ಕೆ ಹೋಗುವಷ್ಟು ಪವರ್‌ ಇದರಲ್ಲಿದೆ. ಇದರೊಂದಿಗೆ 2 ವೀಲ್‌ಡ್ರೆçವ್‌ ಮತ್ತು ಆಫ್ರೋಡ್‌ಗಾಗಿ 4*4 ಮಾದರಿಯಲ್ಲೂ ವಾಹನ ಲಭ್ಯವಿದೆ. 4*4 ಮಾದರಿಯಲ್ಲಿ ಅಗತ್ಯಲ್ಲದಿದ್ದಾಗ 4*2 ಮಾದರಿಗೆ ಸ್ವಿಚ್‌ ಹಾಕುವ ಸೌಲಭ್ಯವೂ ಇದೆ. 

ಆಯ್ಕೆ ಯಾರದ್ದು? 
ಪ್ರೀಮಿಯಂಎಸ್‌ಯು ಕಾರುಗಳಲ್ಲಿ ಭಾರತೀಯ ಕಂಪನಿಯ ಮೊದಲ ಮಾಡೆಲ್‌ ಇದಾಗಿದೆ.  4*2 ಮತ್ತು 4*4 ಎಂದು ಎರಡು ಮಾಡೆಲ್‌ಗ‌ಳು ಇದರಲ್ಲಿದೆ.  ಬೆಲೆ ತಲಾ 26.95 ಲಕ್ಷರೂ. ಮತ್ತು 29.95 ಲಕ್ಷರೂ. (ದೆಹಲಿ ಎಕ್ಸ್‌ಷೋರೂಂ) ಆಗಿದೆ. 

– ಈಶ

Advertisement

Udayavani is now on Telegram. Click here to join our channel and stay updated with the latest news.

Next