Advertisement

Mahesh Babu; ‘ಗುಂಟೂರು ಖಾರಂ’ ಬಲು ಜೋರು

01:08 PM Dec 21, 2023 | Team Udayavani |

ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ “ಗುಂಟೂರು ಖಾರಂ’ ಸಿನಿಮಾದ ಬಿಡುಗಡೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಮಹೇಶ್‌ ಬಾಬು ಮತ್ತೂಮ್ಮೆ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ “ಗುಂಟೂರು ಕಾರಂ’ ಸಿನಿಮಾ ಮುಂಬರುವ ಜನವರಿ 12ಕ್ಕೆ ತೆರೆಗೆ ಬರುತ್ತಿದ್ದು, ಈಗಿನಿಂದಲೇ ತಮ್ಮ ನೆಚ್ಚಿನ ನಟನನ್ನು ಹೊಸ ಸಿನಿಮಾದ ಮೂಲಕ ಬರ ಮಾಡಿಕೊಳ್ಳಲು ಪ್ರಿನ್ಸ್‌ ಫ್ಯಾನ್ಸ್‌ ತಯಾರಿ ನಡೆಸುತ್ತಿದ್ದಾರೆ.

Advertisement

ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಬಹು ನಿರೀಕ್ಷಿತ “ಗುಂಟೂರು ಕಾರಂ’ ಸಿನಿಮಾದಲ್ಲಿ ಪ್ರಿನ್ಸ್‌ ಮಹೇಶ್‌ ಬಾಬು ಅವರಿಗೆ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ತೆರೆಮೇಲೆ ಜೋಡಿಯಾಗಿದ್ದಾರೆ. ಉಳಿದಂತೆ ಜಗಪತಿ ಬಾಬು, ರಮ್ಯಾ ಕೃಷ್ಣನ್‌, ಪ್ರಕಾಶ್‌ ರಾಜ್‌, ವೆನ್ನೆಲ ಕಿಶೋರ್‌ ಹೀಗೆ ಬೃಹತ್‌ ಕಲಾವಿದರ ತಾರಾಗಣ ಸಿನಿಮಾದಲ್ಲಿದೆ.

ಸಿನಿಮಾದ ಹಾಡುಗಳಿಗೆ ಥಮನ್‌ ಸಂಗೀತ ಸಂಯೋಜಿಸಿದ್ದು, “ಹಾರಿಕಾ ಮತ್ತು ಹಾಸನ್‌ ಕ್ರಿಯೇಷನ್ಸ್‌’ ಬ್ಯಾನರಿನಲ್ಲಿ ದುಬಾರಿ ವೆಚ್ಚದಲ್ಲಿ ಅದ್ಧೂರಿಯಾಗಿ “ಗುಂಟೂರು ಕಾರಂ’ ಸಿನಿಮಾ ಮೂಡಿಬಂದಿದೆ.

ಮೂಲಗಳ ಪ್ರಕಾರ, “ಗುಂಟೂರು ಕಾರಂ’ ಸಿನಿಮಾದ ಥಿಯೇಟರಿಕಲ್‌ ಟ್ರೇಲರ್‌ ಅನ್ನು ಜನವರಿ 6ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ ಎನ್ನಲಾಗಿದೆ. ಸಿನಿಮಾದ ಬಿಡುಗಡೆಗೂ ಮುನ್ನ “ಗುಂಟೂರು ಕಾರಂ’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ಕೂಡ ಅದ್ಧೂರಿಯಾಗಿ ನಡೆಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಇನ್ನು ಕರ್ನಾಟಕದಲ್ಲೂ ಕೂಡ “ಗುಂಟೂರು ಕಾರಂ’ ಸಿನಿಮಾದ ಥಿಯೇಟರ್‌ ಹಕ್ಕುಗಳಿಗೆ ಬಾರೀ ಬೇಡಿಕೆ ಬರುತ್ತಿದ್ದು, ಕರ್ನಾಟಕದ ಬಹುಭಾಗಗಳಲ್ಲಿ “ಗುಂಟೂರು ಕಾರಂ’ ಜೋರಾಗಿರಲಿರುವ ಸಾಧ್ಯತೆಗಳು ದಟ್ಟವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next