ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್ (ಮಾಹೆ) ನಡೆಸುವ ಗಾಂಧಿ ಮತ್ತು ಶಾಂತಿ ಅಧ್ಯಯನ ದಲ್ಲಿಯ ಸರ್ಟಿಫಿಕೇಟ್ ಕೋರ್ಸ್ ಹೊಸ ವಿಧಾನ ಮತ್ತು ಪಠ್ಯ ಕ್ರಮದೊಂದಿಗೆ ಮುಂದುವರಿಯಲಿದೆ. ಕೋರ್ಸ್ ಅನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಈ ವರ್ಷದ ಸೆ.3ರಿಂದ ಪ್ರಾರಂಭಿಸಲಿದೆ.
ಪಠ್ಯಕ್ರಮವು ಗಾಂಧಿ ತತ್ವಶಾಸ್ತ್ರ, ಗಾಂಧಿ ಎಸ್ಥೆಟಿಕ್ಸ್, ಗಾಂಧಿ ಮತ್ತು ರಾಜಕೀಯ, ಪತ್ರಿಕೋದ್ಯಮ ಮತ್ತು ಶಿಕ್ಷಣ, ಅರ್ಥಶಾಸ್ತ್ರ ಮತ್ತು ನಿರ್ವಹಣೆ, ಗಾಂಧಿ ಮತ್ತು ಸಮಾಜ, ಶಾಂತಿ ಅಧ್ಯಯನ, ಸಮುದಾಯ ಅಭಿವೃದ್ಧಿ ಕುರಿತು ಕೇಂದ್ರೀಕೃತವಾಗಿದೆ. ಕ್ಷೇತ್ರ ಕಾರ್ಯವನ್ನೂಒಳಗೊಂಡಿದೆ.
ಕೋರ್ಸ್ 2019ರ ಸೆ.3ರಿಂದ 2019ರ ಅ.30ರ ವರೆಗೆ ಎರಡು ತಿಂಗಳು ಅವಧಿಯದ್ದಾಗಿದೆ. ಪ್ರತಿ ಸೋಮವಾರ ಮತ್ತು ಮಂಗಳವಾರ ಸಂಜೆ 5.30ರಿಂದ 7ರ ವರೆಗೆ ತರಗತಿಗಳು ನಡೆಯಲಿವೆ. 10 + 2 ಅರ್ಹತೆ ಹೊಂದಿರುವ ಯಾರೂ ಈ ಕೋರ್ಸ್ ಅನ್ನು ಆಯ್ದುಕೊಳ್ಳಬಹುದಾಗಿದೆ ಎಂದು ಜಿಸಿಪಿಎಎಸ್ ನಿರ್ದೇಶಕ ಪ್ರೊ| ವರದೇಶ್ ಹಿರೆಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ಅರ್ಹತೆ, ಇಮೇಲ್ ಐಡಿ, ದೂರವಾಣಿ ಸಂಖ್ಯೆ ಮತ್ತು ಅರ್ಹತಾ ಪರೀಕ್ಷೆಯ ವಿವರಗಳೊಂದಿಗೆ
varadesh.gange@manipal.eduಗೆ ಇಮೇಲ್ ಕಳುಹಿಸಬೇಕು.
ಪರ್ಯಾಯವಾಗಿ, ನಿರ್ದೇಶಕರು, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್, ಓಲ್ಡ್ ಟ್ಯಾಪ್ಮಿ ಕಟ್ಟಡ, ಪೋಸ್ಟ್ ಆಫೀಸ್ ಹಿಂದೆ, ಮಣಿಪಾಲ ವಿವಿ, ಮಣಿಪಾಲ – 576 104 ಈ ಅಂಚೆ ವಿಳಾಸಕ್ಕೂ ಮೇಲಿನ ಎಲ್ಲ ವಿವರಗಳೊಂದಿಗೆ ಅರ್ಜಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 0820- 2922915 ಸಂಪರ್ಕಿಸಬಹುದಾಗಿದೆ.