Advertisement
2008ರ ಸೆ. 14ರಂದು ಬೆಳಗ್ಗೆ 10.10ಕ್ಕೆ ಮಂಗಳೂರಿನ ಫಳ್ನೀರ್ ರಸ್ತೆಯ ಎಡೋರೇಶನ್ ಮೊನಾಸ್ಟರಿಯಲ್ಲಿ ಕ್ರೈಸ್ತ ಧರ್ಮದವರು ಮೌನ ಪ್ರಾರ್ಥನೆ ಮಾಡುತ್ತಿದ್ದಾಗ 10ರಿಂದ 15 ಜನರು ಅಕ್ರಮ ಪ್ರವೇಶ ಮಾಡಿ ಮರದ ದೊಣ್ಣೆಯಿಂದ ಮಂದಿರದ ಕಿಟಿಕಿ ಗಾಜು ಇತ್ಯಾದಿಗಳನ್ನು ಹಾಗೂ ಪರಮ ಪ್ರಸಾದ ಮತ್ತು ಏಸು ಕ್ರಿಸ್ತ ದೇವರ ವಿಗ್ರಹದ ಎಡಗೈಯನ್ನು ತುಂಡರಿಸಿದ್ದಲ್ಲದೆ ಕೆಲವರಿಗೆ ಹೊಡೆದು, ಕಾರುಗಳನ್ನು ಹಾನಿ ಮಾಡಿ ಕ್ರೈಸ್ತಧರ್ಮದ ಕೋಮು ಸೌಹಾರ್ದಕ್ಕೆ ಧಕ್ಕೆ ಮಾಡುವ ಪ್ರಯತ್ನ ನಡೆಸಿದ್ದರು. ಅಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಮಂಗಳೂರು ನಗರ,ಬಂಟ್ವಾಳ, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಮಾಡಿರುವುದಾಗಿ ಆರೋಪಿಸಲಾಗಿತ್ತು.ಅದೇ ದಿನ ಪತ್ರಿಕಾಗೋಷ್ಠಿ ಕರೆದು ಘಟನೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದ ಆರೋಪ ಮಹೇಂದ್ರ ಕುಮಾರ್ ಮೇಲಿತ್ತು.
ಈ ಪ್ರಕರಣದಲ್ಲಿ ಕೆಲವು ಪತ್ರಿಕಾ ವರದಿಗಾರರ ಸಹಿತ ಒಟ್ಟು 12 ಜನ ಸಾಕ್ಷಿ ನುಡಿದಿದ್ದರು. ಮಹೇಂದ್ರಕುಮಾರ್ ಅವರನ್ನು ಆಗಿನ ಸಿಸಿಬಿ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನ ಬಂಧಿಸಿದ್ದರು. ಸರಕಾರ ಈ ಪ್ರಕರಣವನ್ನು ಸಿಒಡಿಗೆ ವರ್ಗಾಯಿಸಿದ್ದರಿಂದ ಸಿಒಡಿ ಇನ್ಸ್ ಪೆಕ್ಟರ್ ಪರಶಿವಮೂರ್ತಿ ಮತ್ತು ಸುಶೀಲಾ ಅವರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.