Advertisement

MAHE – Manipal ನ. 29-30:ಅಂಧ ಮಹಿಳೆಯರ ಟಿ-10 ಕ್ರಿಕೆಟ್‌ ಪಂದ್ಯಾಟ

12:04 AM Nov 24, 2023 | Team Udayavani |

ಮಣಿಪಾಲ: ರಾಜ್ಯಮಟ್ಟದ ಅಂಧ ಮಹಿಳೆಯರ ಟಿ-10 ಕ್ರಿಕೆಟ್‌ ಪಂದ್ಯಾಟವು ನ. 29 ಮತ್ತು 30ರಂದು ಮಾಹೆ ವಿ.ವಿ.ಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಜರಗಲಿದೆ ಎಂದು ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಮಾಹೆ ವಿ.ವಿ., ಸಮರ್ಥನಂ ಟ್ರಸ್ಟ್‌ ಫಾರ್‌ ದಿ ಡಿಸೇಬಲ್ಡ್‌, ಅಗ್ರಜ ಫೌಂಡೇಶನ್‌ ಮತ್ತು ಕರ್ನಾಟಕ ಅಂಧರ ಕ್ರಿಕೆಟ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಈ ಕ್ರಿಕೆಟ್‌ ಪಂದ್ಯಾಟ ನಡೆಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಇಲ್ಲಿ ನಡೆಯಲಿದೆ ಎಂದರು.

ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಮಾಹೆ ವಿ.ವಿ.ಯು ಸಾಮಾಜಿಕ ಬದ್ಧತೆಯಡಿ ಆಗಮಿಸುವ ಕ್ರೀಡಾಳುಗಳಿಗೆ ಆಹಾರ, ವಸತಿ, ಸಮವಸ್ತ್ರ, ಶೂ ಸಹಿತ ವಿವಿಧ ಸವಲತ್ತು ನೀಡಲಿದೆ. ಹಾಗೆಯೇ ಹ್ಯಾಕಥಾನ್‌ ಕೂಡ ಆಯೋಜಿಸಲಿದ್ದೇವೆ ಎಂದರು.
ಅಸೋಸಿಯೇಶನ್‌ ಫಾರ್‌ ದಿ ಬ್ಲೆ„ಂಡ್‌ ಆಫ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ಡಾ| ಮಹಾಂತೇಶ್‌ ಜಿ. ಕಿವಾದಾಸಣ್ಣವರ್‌ ಮಾತನಾಡಿ, ಕಾರವಾರ ಹಾಗೂ ಮೈಸೂರಿನ ತಲಾ ಒಂದು ತಂಡ ಮತ್ತು ಬೆಂಗಳೂರು ಸಮರ್ಥನಂ, ದೀಪಾ ಅಕಾಡೆಮಿಯಿಂದ ತಲಾ 1 ತಂಡ ಹೀಗೆ ನಾಲ್ಕು ತಂಡಗಳ 56 ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಪೂರ್ಣ ಅಂಧರು, ಸ್ವಲ್ಪ ಅಂಧತ್ವ ಹೀಗೆ ಮೂರು ವಿಭಾಗದಲ್ಲಿ ಆಯ್ಕೆ ನಡೆಯಲಿದೆ. ರಾಜ್ಯ ತಂಡಕ್ಕೆ 14 ಕ್ರೀಡಾಪಟುಗಳನ್ನು ಅವರ ಪ್ರದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಿದ್ದೇವೆ. ರಾಷ್ಟ್ರೀಯ ತಂಡ ಆಯ್ಕೆ ಪ್ರಕ್ರಿಯೆಗೆ ದೇಶದ ವಿವಿಧ ರಾಜ್ಯಗಳ 16 ತಂಡಗಳು ಆಗಮಿಸಲಿವೆ ಎಂದರು.
ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌, ಕುಲಸಚಿವ ಡಾ| ಗಿರಿಧರ ಕಿಣಿ, ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌, ಹರೀಶ ಕುಮಾರ್‌, ಶಿಖಾ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next