Advertisement

‘ಪರಿಸರ, ಕಲೆ ಮತ್ತು ಶಾಂತಿ’ ಅಂತರರಾಷ್ಟ್ರೀಯ ವಿಚಾರಗೋಷ್ಠಿ

08:42 PM Jun 03, 2021 | Team Udayavani |

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆರೋಗ್ಯ ಮತ್ತು ತಾಂತ್ರಿಕ ವಿಜ್ಞಾನಗಳ ಜೊತೆಗೆ ಸಾಮಾಜಿಕ ವಿಜ್ಞಾನ ಮತ್ತು ಕಲೆಗಳ ಅಧ್ಯಯನದ ಬಗ್ಗೆಯೂ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ.ವೆಂಕಟೇಶ್ ಹೇಳಿದರು.

Advertisement

‘ಪರಿಸರ, ಕಲೆ ಮತ್ತು ಶಾಂತಿ’ ಕುರಿತ ಅಂತರರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ, ಕಲೆ ಮತ್ತು ಶಾಂತಿ ಸಮಕಾಲೀನ ಕಾಲದಲ್ಲಿ ಮೂರು ಪ್ರಮುಖ ಕ್ಷೇತ್ರಗಳಾಗಿವೆ. ಸಮಸ್ಯೆಗಳು ವೈಯಕ್ತಿಕ, ಸಾಮಾಜಿಕ ಮತ್ತು ಪರಿಸರಕ್ಕೆ ಸಂಬಂಧಪಟ್ಟಾಗ , ಕಲೆ ಈ ಬಿಕ್ಕಟ್ಟುಗಳನ್ನು ಪರಿಹರಿಸುವ ಸಾಧನವಾಗಬಹುದು, ಸಾಮಾಜಿಕ ವಿಜ್ಞಾನ ಮತ್ತು ಕಲೆಗೆ ಸಂಬಂಧಿಸಿದ ಅಧ್ಯಯನಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಾಹೆ ಯಾವಾಗಲು ನಂಬುತ್ತದೆ ಎಂದರು.

ಇದನ್ನೂ ಓದಿ : ಶಿಲ್ಪನಾಗ್ ರಾಜೀನಾಮೆಯ ಹಿಂದಿನ ಕಾರಣವನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ:ಎಸ್.ಟಿ.ಸೋಮಶೇಖರ್

ಶಿಖರೋಪನ್ಯಾಸ ಮಾಡಿದ ಯುನೆಸ್ಕೋ ಪೀಸ್ ಚೇರ್ ನ ಪ್ರೊಫೆಸರ್ ಎಂ ಡಿ ನಲಪತ್, ಈ ಬಿಕ್ಕಟ್ಟಿನಿಂದ ಬಳಲುತ್ತಿರುವ ಸಮಯದಲ್ಲಿ ಗಾಂಧಿವಾದಿ ದೃಷ್ಟಿ ಕೋನವೇ ಸಾಂತ್ವನದ ದಾರಿಯಾಗಬಹುದು ಎಂದು ಸಮರ್ಥಿಸಿಕೊಂಡರು. ವಿಜ್ಞಾನ ಮತ್ತು ಕಲೆಗಳು ಈ ಸಂದರ್ಭದಲ್ಲಿ ಕೈಜೋಡಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕರಾದ ಪ್ರೊಫೆಸರ್ ವರದೇಶ್ ಹಿರೆಗಂಗೆ ಕೋವಿಡ್ ದಿನಗಳಲ್ಲಿ ವಿದ್ವತ್ಪೂರ್ಣ ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಈ ವಿಚಾರಗೋಷ್ಠಿ ಒಂದು ಪ್ರಯತ್ನವಾಗಿದೆ. ವಿಚಾರಗೋಷ್ಠಿಯಲ್ಲಿ ಮಂಡನೆಯಾಗುತ್ತಿರುವ ನಲವತ್ತಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳ ಶ್ರೇಣಿ ಮತ್ತು ಗುಣಮಟ್ಟ ನಿಜವಾಗಿಯೂ ಅದ್ಭುತವಾಗಿದೆ ಎಂದರು.

Advertisement

ಶ್ರಾವ್ಯ ಬಾಸ್ರಿ ಅವರು ಪ್ರಾರ್ಥಿಸಿ, ಧನ್ಯವಾದಗಳನ್ನು ಸಮರ್ಪಿಸಿದರು. ಮತ್ತು ಧನ್ಯಾ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.

ಇದನ್ನೂ ಓದಿ :  ಫೈಜರ್,ಜೆ&ಜೆ,ಮಾಡೆರ್ನಾ ಸಂಸ್ಥೆಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ: ಶ್ರಿಂಗ್ಲಾ

Advertisement

Udayavani is now on Telegram. Click here to join our channel and stay updated with the latest news.

Next