ಮಹಾನಗರ : ದೇಶ ಕ್ಕೋಸ್ಕರ ತ್ಯಾಗ ಬಲಿದಾನದ ಮೂಲಕ ಮಹಾತ್ಮರೆನಿಸಿಕೊಂಡ ಗಾಂಧೀಜಿ ಯವರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅವರ ತತ್ತ್ವಾದರ್ಶಗಳನ್ನು ಇಂದಿನ ಯುವ ಜನತೆಗೆ ತಲುಪಿಸುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನದಂದು ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಹಂಗಾಮಿ ಅಧ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಗಾಂಧೀಜಿಯವರ ಸಿದ್ದಾಂತ ಗಳೇ ದೇಶದ ಸಿದ್ಧಾಂತವಾಗಿದೆ ಎಂದರು.
ಧನಂಜಯ ಅಡ್ಪಂಗಾಯ, ಕೆ.ಕೆ. ಶಾಹುಲ್ ಹಮೀದ್, ಹಿಲ್ಡಾ ಆಳ್ವ, ಶೇಖರ್ ಕುಕ್ಕೇಡಿ, ಬಲರಾಜ್ ರೈ, ವಿಶ್ವಾಸ್ ಕುಮಾರ್ ದಾಸ್, ಬಿ.ಎಂ. ಭಾರತಿ, ನಝೀರ್ ಬಜಾಲ್, ಲಕ್ಷ್ಮೀ ನಾಯರ್, ಸಿ.ಎಂ. ಮುಸ್ತಫಾ, ನೀರಜ್ ಪಾಲ್, ಯು.ಎಚ್. ಖಾಲಿ ದ್ ಉಜಿರೆ, ಹಯಾತುಲ್ಲಾ ಕ್ವಾಮಿಲ್, ಗಣೇಶ್ ಪೂಜಾರಿ, ಜಯ ಶೀÇ ಅಡ್ಯಂತಾಯ, ಪ್ರೇಮ್‌ನಾಥ್ ಪಿ.ಬಿ, ಭಾಸ್ಕರ್ ರಾವ್, ತೆರೇಜಾ ಪಿಂಟೋ, ರವಿರಾಜ್ ವಾಮಂಜೂರು, ಪೀಯೂಸ್ ಮೊಂತೆರೋ, ರಮಾ ನಂದ ಪೂಜಾರಿ, ಟಿ.ಕೆ ಸುಧೀರ್, ಎಸ್.ಕೆ. ಸೌಹಾನ್, ಶಬ್ಬೀರ್ ಸಿದ್ಧ ಕಟ್ಟೆ, ಶಶಿರಾಜ್ ಅಂಬಟ್, ಪ್ರದೀಪ್ ಬೇಕಲ್, ಯೂಸುಫ್ ಉಚ್ಚಿಲ್, ಪದ್ಮನಾಭ ಅಮೀನ್, ಹಬೀಬ್ ಕಣ್ಣೂರು, ಸಂಜೀವ ಪಾಂಡೇಶ್ವರ್, ವಹಾಬ್ ಕುದ್ರೋಳಿ ಉಪಸ್ಥಿತರಿದ್ದರು.
ದ.ಕ. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿ, ಸೇವಾದಳ ಎಚ್.ಎಂ. ಅಶ್ರಫ್ ವಂದಿಸಿದರು.
ಅಹಿಂಸಾ ದಿನ
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾದ ಐವನ್ ಡಿ’ಸೋಜಾ ಮಾತನಾಡಿ, ಗಾಂಧೀಜಿ ಅವರ ಮರಣ ದಿನವನ್ನು ಹುತಾತ್ಮರ ದಿನವನ್ನಾಗಿ ದೇಶವು ಆಚರಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಇದು ನಮ್ಮ ದೇಶಕ್ಕೊಂದು ಹೆಮ್ಮೆಯ ವಿಚಾರ ಎಂದರು.