ಬೆಂಗಳೂರು: ಸ್ವಾತಂತ್ರ್ಯದಿನದ ಅಮೃತ ಮಹೋತ್ಸವ ಆಚರಣೆ ರಾಜಧಾನಿಯಲ್ಲಿ ಅತ್ಯಂತ ಸಡಗರದಿಂದ ನೆರವೇರಿತು. ಆಡಳಿತದ ವಿಧಾನಸೌಧ ಮತ್ತು ರಾಜಭವನವು ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸಿತು. ಮೊದಲ ಬಾರಿಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸ್ವಾತಂತ್ರ್ಯೋತ್ಸವದ ಉಪನ್ಯಾಸವೂ ನಡೆಯಿತು. ಆದರೆ, ಈ ಎಲ್ಲ ಸಂಭ್ರಮಕ್ಕೆ ಕಾರಣರಾದ ಎರಡೂ ಶಕ್ತಿಸೌಧಗಳ ನಡುವಿರುವ ಮಹಾತ್ಮ
ಗಾಂಧಿ ಮರೆತುಹೋದರು!
ಹೌದು, ವಿಧಾನಸೌಧ ಮತ್ತು ವಿಕಾಸ ಸೌಧ ಮಧ್ಯೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದೆ. ಆದರೆ, ಅದೇ ಸ್ವಾತಂತ್ರ್ಯೋತ್ಸವದ ಸಡಗರದಲ್ಲಿ ಆ ಪ್ರತಿಮೆಗೆಕೊನೆಪಕ್ಷ ಮಾಲಾರ್ಪಣೆ
ಮಾಡುವುದನ್ನೂ ಮರೆತಿದೆ.
ಇದನ್ನೂ ಓದಿ:ಅಫ್ಘಾನ್ ವಲಸಿಗರು ಮತ್ತೆ ಅತಂತ್ರ: ಟರ್ಕಿಯಿಂದ 295 ಕಿಲೋ ಮೀಟರ್ ಬೃಹತ್ ಗೋಡೆ ನಿರ್ಮಾಣ!
75 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ವಿಶೇಷ. ಇದೇಕಾರಣಕ್ಕೆ ಸರ್ಕಾರ ಅಮೃತ ಮಹೋತ್ಸವದ ಸವಿನೆನಪಿಗಾಗಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ರೂಪಿಸಿದೆ. ಸ್ವಾತಂತ್ರ್ಯೋತ್ಸವಕ್ಕೆ ಎರಡು ದಿನ ಮುಂಚಿತವಾಗಿಯೇ ವಿಧಾನಸೌಧ ಮತ್ತು
ಆವರಣವನ್ನು ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು. ದೀಪಗಳಿಂದ ಮಿಂಚುತ್ತಿದ್ದ ವಿಧಾನಸೌಧದ ಮುಂದೆ ಸಿಬ್ಬಂದಿ”ಫೋಟೋ ಸೆಷನ್’ ನಡೆಯಿತು. ಆದರೆ, ವಿಧಾನಸೌಧ ಪಕ್ಕದಲ್ಲೇ ಇರುವ ಗಾಂಧಿ ಪ್ರತಿಮೆ ಕಾಣಿಸಲಿಲ್ಲ.