Advertisement
ರಾಜ್ಯ ಸರಕಾರ 2022-23ನೇ ಆರ್ಥಿಕ ವರ್ಷದಲ್ಲಿ ಕಡಬ ತಾಲೂಕಿಗೆ 2,30,509 ಮಾನವ ದಿನ ಸೃಜನೆಯ ಗುರಿಯನ್ನು ನಿಗದಿಪಡಿಸಿತ್ತು. ಆದರೆ ತಾಲೂಕು 2,59,667 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 113 ಗುರಿಯನ್ನು ಸಾಧಿಸಿದೆ. 21 ಗ್ರಾ.ಪಂ.ಗಳ ಮೂಲಕ ಮಹಾತ್ಮಾ¾ ಗಾಂಧಿ ನರೇಗಾ ಯೋಜನೆಯಡಿ ಅಕುಶಲ ಉದ್ಯೋಗವನ್ನು ಹಾಗೂ ಗ್ರಾಮೀಣ ಜನತೆಯ ಜೀವನೋಪಾಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವ ಮೂಲಕ ಹಾಗೂ ಗ್ರಾಮೀಣ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಂಡು ಗುರಿ ಮೀರಿದ ಸಾಧನೆ ಮಾಡಿದೆ.
ಈ ಬಾರಿ ಐತ್ತೂರು 3,731, ಆಲಂಕಾರು 15,699, ಬಳ್ಪ 7,610, ಬೆಳಂದೂರು 17,725, ಬಿಳಿನೆಲೆ 11,344, ಗೋಳಿತೊಟ್ಟು 20,940, ಕಾಣಿಯೂರು 9,542, ಕೌಕ್ರಾಡಿ 12,870, ಕೊçಲ 11,266, ಕೊಂಬಾರು 5,432, ಕೊಣಾಜೆ 3,778, ಕುಟ್ರಾಪಾಡಿ 16,026, ಮರ್ದಾಳ 8,402, ನೆಲ್ಯಾಡಿ 14,070, ನೂಜಿಬಾಳ್ತಿಲ 14,237, ಪೆರಾಬೆ 13,332, ರಾಮಕುಂಜ 11,159, ಸವಣೂರು 17,296, ಶಿರಾಡಿ 18,525, ಸುಬ್ರಹ್ಮಣ್ಯ 14,090, ಎಡಮಂಗಲ ಗ್ರಾ.ಪಂ. 12,593 ಮಾನವ ದಿನಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಜನತೆಗೆ ಉದ್ಯೋಗ ನೀಡವುದರ ಜತೆಗೆ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸವಾಗಿದೆ. ತಾಲೂಕಿನಲ್ಲಿ 17,146 ಕುಟುಂಬಗಳು ನರೇಗಾ ಯೋಜನೆಯ ಉದ್ಯೋಗ ಚೀಟಿ ಪಡೆದುಕೊಂಡಿವೆ. ಅದರಲ್ಲಿ ಈ ಬಾರಿ 7,485 ಕುಟುಂಬಗಳು ಸಕ್ರಿಯವಾಗಿ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ.
Related Articles
ಗ್ರಾ.ಪಂ.ಗಳಲ್ಲಿ ವೈಯಕ್ತಿಕ ಕಾಮಗಾರಿ ಗಳಿಗೆ ಬೇಡಿಕೆ ಹೆಚ್ಚಿದ್ದು, ತೋಟಗಾರಿಕೆ, ಸೊÌàದ್ಯೋಗ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅಡಿಕೆ, ತೆಂಗು, ಕಾಣುಮೆಣಸು, ಕೊಕ್ಕೊ, ಗೇರು, ವೀಳ್ಯದೆಲೆ, ಮಲ್ಲಿಗೆ ಕೃಷಿ ಹೀಗೆ ಸುಮಾರು 1,569 ತೋಟಗಾರಿಕೆ ಕಾಮಗಾರಿಗಳನ್ನು ಅನುಷ್ಠಾನಿಸಲಾಗಿದೆ. ಅವುಗಳಲ್ಲಿ 30 ಬಸಿ ಕಾಲುವೆ, 123 ಬಾವಿ, 29 ಆಡಿನ ಶೆಡ್, 330 ದನದ ಹಟ್ಟಿ, 14 ಹಂದಿ ಸಾಕಾಣೆ ಶೆಡ್, 77 ಕೋಳಿ ಶೆಡ್, 241 ಸೋಕ್ ಪಿಟ್, 4 ಕೃಷಿ ಹೊಂಡ, 507 ಶೌಚಾಲಯ, 18 ಎರೆಹುಳು ಗೊಬ್ಬರ ಘಟಕ, 18 ಕಡೆಗಳಲ್ಲಿ ಮಳೆ ನೀರು ಇಂಗು ಗುಂಡಿಗಳು, 52 ಗೊಬ್ಬರ ಗುಂಡಿ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗಿ ಒಟ್ಟು 3,012 ವೈಯಕ್ತಿಕ ಕಾಮಗಾರಿಗಳನ್ನು ತಾಲೂಕಿನಲ್ಲಿ ಅನುಷ್ಠಾನಿಸಲಾಗಿದೆ.
Advertisement
2023-24ರಿಂದ ದಿನಕ್ಕೆ 316 ರೂ. ಕೂಲಿಪುರುಷ ಮತ್ತು ಮಹಿಳೆಯರಿಗೆ ಸಮಾನವೇತನ ನೀಡುವ ನಿಟ್ಟಿನಲ್ಲಿ ಈ ಬಾರಿ ದಿನವೊಂದಕ್ಕೆ 309 ರೂ. ಕೂಲಿ ನೀಡಲಾಗುತ್ತಿದ್ದು ಮುಂದಿನ ಆರ್ಥಿಕ ವರ್ಷದಿಂದ 316 ರೂ. ಕೂಲಿ ದೊರೆಯಲಿದೆ. 2023-24 ನೇ ಸಾಲಿನಲ್ಲಿ 7 ರೂ. ಕೂಲಿ ಮೊತ್ತ ಹೆಚ್ಚಳಗೊಳಿಸಿ ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದೆ. ಯೋಜನೆಯಡಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನವೇತನ ನೀಡುತ್ತಿದ್ದು, ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಸದಸ್ಯರಿಗೆ ಒತ್ತನ್ನು ನೀಡಲಾಗುತ್ತಿದೆ. ವಿಶೇಷವಾಗಿ ಪ್ರತೀ ಗ್ರಾ.ಪಂ.ಗಳಲ್ಲಿ ವಿಶೇಷ ಮಹಿಳಾ ಗ್ರಾಮ ಸಭೆ ಯಶಸ್ವಿಯಾಗಿ ನಡೆಸಿರುವ ಪರಿಣಾಮ ಕಳೆದ ವರ್ಷ ಶೇ. 47ರಷ್ಟಿದ್ದ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ. 50ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಕಡಬ ತಾ.ಪಂ. ಸಹಾಯಕ ನಿರ್ದೇಶಕರು (ಗ್ರಾ.ಉ.) ಚೆನ್ನಪ್ಪ ಗೌಡ ಕಜೆಮೂಲೆ. ಸದುಪಯೋಗಪಡಿಸಿಕೊಳ್ಳಿ
ತಾಲೂಕಿನಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಪ್ರತೀ ವರ್ಷ ಗುರಿಯನ್ನು ಸಾಧಿಸುವ ಕೆಲಸವಾಗುತ್ತಿವೆ. ಅದಕ್ಕೆ ಸಹಕರಿಸಿದ ಎಲ್ಲ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಿಬಂದಿಗೆ ಅಭಿನಂದನೆಗಳು. ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳು ಇದರ ಸದುಪಯೋಗವನ್ನು ಮತ್ತಷ್ಟು ಪಡೆದುಕೊಳ್ಳಬೇಕು.
-ನವೀನ್ ಭಂಡಾರಿ,
ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ. - ನಾಗರಾಜ್ ಎನ್. ಕೆ.