Advertisement

ಮಹಾತ್ಮ ಗಾಂಧಿ ಪಾಕಿಸ್ಥಾನದ ಪಿತ ಎಂದ ಬಿಜೆಪಿ ವಕ್ತಾರನಿಗೆ ಗೇಟ್‌ ಪಾಸ್‌

09:43 AM May 18, 2019 | Team Udayavani |

ಹೊಸದಿಲ್ಲಿ : ಮಹಾತ್ಮಾ ಗಾಂಧಿ ಅವರನ್ನು ಪಾಕಿಸ್ಥಾನದ ಪಿತ ಎಂದು ಕರೆದ ವಿವಾದಿತ ಸೋಶಿಯಲ್‌ ಮೀಡಿಯ ಪೋಸ್ಟ್‌ ಗಾಗಿ ಭಾರತೀಯ ಜನತಾ ಪಕ್ಷದ ವಕ್ತಾರ ಅನಿಲ್‌ ಸೌಮಿತ್ರ ಅವರನ್ನು ಪಕ್ಷದ  ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

Advertisement

ಅನಿಲ್‌ ಅವರು ತಮ್ಮ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ “ಗಾಂಧಿ ಅವರು ಪಾಕಿಸ್ಥಾನದ ಪಿತ; ಗಾಂಧಿ ರೀತಿಯ ಕೋಟ್ಯಂತರ ಜನರು ಭಾರತದಲ್ಲಿ ಜನಿಸಿದ್ದಾರೆ; ಕೆಲವರು ಉಪಯುಕ್ತರಾಗಿದ್ದಾರೆ; ಇನ್ನು ಕೆಲವರು ನಿರುಪಯುಕ್ತರಾಗಿದ್ದಾರೆ’ ಎಂದು ಬರೆದಿದ್ದರು.

ಈ ವಿವಾದಿತ ಪೋಸ್ಟ್‌ ಬಗ್ಗೆ ತನಿಖೆ ಕೈಗೊಂಡ ಮಧ್ಯ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರು, ಏಳು ದಿನಗಳ ಒಳಗೆ ಉತ್ತರಿಸುವಂತೆ ಅನಿಲ್‌ ಅವರಿಗೆ ನೊಟೀಸ್‌ ಜಾರಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next