Advertisement

ಗಾಂಧಿ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಮುಂದಾದ ನಿರ್ಮಾಪಕರು

08:49 PM Jun 10, 2020 | Sriram |

ಜೋಹಾನ್ಸ್‌ಬರ್ಗ್‌: ಆಫ್ರಿಕನ್‌-ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ ಅವರ ಸಾವಿನ ಹಿನ್ನೆಲೆಯಲ್ಲಿ ಉಂಟಾಗಿರುವ ವ್ಯಾಪಕ ಆಕ್ರೋಶದ ನಡುವೆ, ಮಹಾತ್ಮ ಗಾಂಧಿಯವರ ಕುರಿತಾದ ನೂತನ ಸಾಕ್ಷ್ಯಚಿತ್ರವನ್ನು ಅವಧಿಗೂ ಮೊದಲೇ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ.

Advertisement

ಗಾಂಧಿಯವರು ಪ್ರತಿಪಾದಿಸಿದ ಅಹಿಂಸಾತತ್ವ, ಅವರ ಬೋಧನೆಗಳ ಪ್ರಸ್ತುತತೆಯನ್ನು ಈ ಸಂದರ್ಭದಲ್ಲಿ ಒತ್ತಿ ಹೇಳುವುದುಇದರ ಮೂಲ ಉದ್ದೇಶ.

ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಚಿತ್ರ ನಿರ್ಮಾಪಕ ಅನಂತ ಸಿಂಗ್‌ ಅವರ ಕಂಪನಿ ವಿಡಿಯೋವಿಷನ್‌,”ಅಹಿಂಸಾ ಗಾಂಧಿ; ದಿ ಪವರ್‌ ಆಫ್ ದಿ ಪವರ್‌ಲೆಸ್‌’ ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದೆ. ರಮೇಶ್‌ ಶರ್ಮಾ ಅವರು ಇದಕ್ಕೆ ಚಿತ್ರಕಥೆ ಬರೆದಿದ್ದಾರೆ.

ಗಾಂಧಿಯವರ 150ನೇ ಜನ್ಮದಿನಾಚರಣೆಯ ನೆನಪಿಗಾಗಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಈ ಚಿತ್ರವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಚಿತ್ರೋತ್ಸವಗಳನ್ನು ಮುಂದೂಡಲಾಗುತ್ತಿದೆ. ಕೆಲವನ್ನು ರದ್ದುಗೊಳಿಸಲಾಗುತ್ತಿದೆ. ಹೀಗಾಗಿ, ದೂರದರ್ಶನ ಜಾಲಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next