ನವದೆಹಲಿ: ಸ್ವಾತಂತ್ರ್ಯ ಹೋರಾಟದ ವೇಳೆ ವೀರ್ ವಿನಾಯಕ ದಾಮೋದರ್ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿದ್ದಾಗ ಕ್ಷಮಾಪಣಾ ಪತ್ರ ಬರೆಯುವಂತೆ ಸಲಹೆ ನೀಡಿದ್ದು ಮಹಾತ್ಮ ಗಾಂಧಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಆತಂಕಕ್ಕೆ ಕಾರಣವಾದ ಸೂಟ್ ಕೇಸ್: ಒಳಗೇನಿತ್ತು ಗೊತ್ತಾ ?
ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಸಾವರ್ಕರ್ ಬಗ್ಗೆ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಅಂಡಮಾನ್ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಆದರೆ ಕ್ಷಮಾಪಣಾ ಪತ್ರ ಬರೆಯುವಂತೆ ಸಲಹೆ ನೀಡಿದ್ದು, ಮಹಾತ್ಮ ಗಾಂಧಿ ಎಂದು ಹೇಳಿದರು.
ಸಾವರ್ಕರ್ ರಾಷ್ಟ್ರೀಯತೆಯ ಪ್ರತೀಕ ಎಂದ ರಕ್ಷಣಾ ಸಚಿವ ಸಿಂಗ್, ಮಾರ್ಕ್ಸ್ ವಾದಿಗಳು ಮತ್ತು ಲೆನಿನ್ ನಿಷ್ಟ್ ಸಿದ್ಧಾಂತ ಹೊಂದಿರುವ ಜನರು ಸಾವರ್ಕರ್ ಅವರನ್ನು ಫ್ಯಾಸಿಸ್ಟ್ ಎಂದು ಕರೆದಿದ್ದಾರೆ ಎಂದು ತಿಳಿಸಿದರು.
ಸಾವರ್ಕರ್ ಅವರು ಭಾರತದ ಇತಿಹಾಸದ ಪ್ರತೀಕವಾಗಿದ್ದಾರೆ, ಮುಂದೆಯೂ ಇರುತ್ತಾರೆ. ಈ ಬಗ್ಗೆ ಕೆಲವೊಂದು ಭಿನ್ನಾಭಿಪ್ರಾಯಗಳು ಇದೆ. ಆದರೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಸೂಕ್ತವಾದುದಲ್ಲ ಮತ್ತು ಸಮರ್ಥಿಸಿಕೊಳ್ಳುವಂತದ್ದಲ್ಲ. ಸಾವರ್ಕರ್ ಧೀಮಂತ ಸ್ವಾತಂತ್ರ್ಯ ಹೋರಾಟಗಾರ, ಅವರೊಬ್ಬ ರಾಷ್ಟ್ರೀಯವಾದಿ ಎಂದು ರಾಜನಾಥ್ ಸಿಂಗ್ ಹೇಳಿದರು.
ಕಮ್ಯುನಿಷ್ಟ್ ಮತ್ತು ಲೆನಿನಿಸ್ಟ್ ಸಿದ್ಧಾಂತ ನಂಬಿರುವ ಜನರು ಸಾವರ್ಕರ್ ಅವರನ್ನು ಫ್ಯಾಸಿಸ್ಟ್ ಎಂದು ಆರೋಪಿಸುತ್ತಿದ್ದಾರೆ ಎಂಬುದಾಗಿ ಸಿಂಗ್ ತಿಳಿಸಿದ್ದಾರೆ. ಸಾವರ್ಕರ್ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದರು.