Advertisement
ತಾಲೂಕಿನ ವ್ಯಾಪ್ತಿಯ 21 ಗ್ರಾ.ಪಂ. ಗಳ ಮೂಲಕ ಸರಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಜನತೆಗೆ ಉದ್ಯೋಗವನ್ನು ನೀಡುತ್ತಾ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಸರಕಾರ 2021-22 ರಲ್ಲಿ 2,00,509 ಮಾನವ ದಿನ ಸೃಜಿಸುವ ವಾರ್ಷಿಕ ಗುರಿಯನ್ನು ನಿಗದಿಪಡಿಸಿತ್ತಾದರೂ, ನವೆಂಬರ್ 2021 ರಲ್ಲಿಯೇ ತಾಲೂಕು ಶೇ. 100 ಗುರಿಯನ್ನು ಸಾಧಿಸಿ ಮಾರ್ಚ್ ಅಂತ್ಯಕ್ಕೆ 2,78,081 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.139 ಸಾಧನೆಯನ್ನು ಮಾಡಿ ಜಿಲ್ಲೆಯಲ್ಲೇ ಅಧಿಕ ಗುರಿಯನ್ನು ಸಾಧಿಸಿದ ತಾಲೂಕಾಗಿ ಗುರುತಿಸಿಕೊಂಡಿದೆ.
Related Articles
Advertisement
2021-22 ರಲ್ಲಿ ಒಟ್ಟು 9.80 ಕೋ.ರೂ. ಒಟ್ಟು ಅನುದಾನ ಬಳಕೆ ಮಾಡಿಕೊಂಡಿದ್ದು 8 ಕೋ.ರೂ. ಕೂಲಿ ಮೊತ್ತ ಹಾಗೂ 1.80 ಕೋ.ರೂ. ಸಾಮಗ್ರಿ ಅನುದಾನವನ್ನು ಬಳಸಿಕೊಳ್ಳಲಾಗಿದೆ. 2020-21 ನೇ ಆರ್ಥಿಕ ವರ್ಷದಲ್ಲಿ 2,49,483 ಮಾನವ ದಿನಗಳನ್ನು ಸೃಜಿಸುವ ಮೂಲಕ 6.75 ಕೋ.ರೂ ಕೂಲಿ ಹಾಗೂ 1.5 ಕೋ.ರೂ. ಸಾಮಗ್ರಿ ಒಟ್ಟು 8.25 ಕೋ.ರೂ ಅನುದಾನವನ್ನು ಪಡೆದುಕೊಳ್ಳಲಾಗಿತ್ತು.
2 ಪ್ರಶಸ್ತಿ
ನರೇಗಾ ಕಾರ್ಯ ಸಾಧನೆಗಾಗಿ ಶಿರಾಡಿ ಗ್ರಾ.ಪಂ. ಗೆ ಮತ್ತು ಯೋಜನೆಯ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಅವರಿಗೆ ನರೇಗಾ ರಾಜ್ಯ ಪ್ರಶಸ್ತಿ ದೊರೆತಿದೆ
ಗ್ರಾಮ ಪಂಚಾಯತ್‌ಗಳ ಸಾಧನೆ
ಶಿರಾಡಿ 24985, ಗೋಳಿತೊಟ್ಟು 24857, ಬೆಳಂದೂರು 23124 ಸುಬ್ರಹ್ಮಣ್ಯ 20515 ಈ 4 ಗ್ರಾ.ಪಂ. ಗಳು ಸತತ ಎರಡನೇ ವರ್ಷದಲ್ಲಿ ಅಧಿಕ ಮಾನವ ದಿನ ಸೃಜನೆಯನ್ನು ಮಾಡಿವೆ. 4 ಗ್ರಾ.ಪಂ.ಗಳ ಸಾಧನೆ ಕಡಬ ತಾಲೂಕಿನಲ್ಲಿ ಅಡಿಕೆ ಗಿಡ ನಾಟಿ ಹಾಗೂ ದನದ ಹಟ್ಟಿ ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾ ನಗೊಳಿಸಲಾಗಿದೆ. ಕಳೆದ ವರ್ಷ ತಾಲೂಕಿನ 4 ಗ್ರಾ.ಪಂ.ಗಳು ಜಿಲ್ಲೆಯಲ್ಲೇ ಗಣನೀಯ ಕಾರ್ಯವನ್ನು ಮಾಡಿವೆ. –ನವೀನ್ ಭಂಡಾರಿ ಎಚ್., ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.
ಸಹಕಾರ, ಶ್ರಮದಿಂದ ಸಾಧನೆ
2 ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಗ್ರಾ.ಪಂ. ಆಡಳಿತ ವರ್ಗದ ಸಹಕಾರ ಮತ್ತು ನರೇಗಾ ತಂಡದ ಶ್ರಮದ ಫಲದಿಂದ ಗುರಿ ಮೀರಿ ಸಾಧನೆ ಮಾಡಲು ಸಾಧ್ಯವಾಗಿದೆ. –ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕರು(ಗ್ರಾ.ಉ.), ತಾ.ಪಂ. ಕಡಬ