ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಒಟ್ಟಾರೆ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿದೆ. ಬುಧವಾರ ಮಹಾರಾಷ್ಟ್ರ ರಾಜ್ಯದಲ್ಲಿ 57640 ಹೊಸ ಕೋವಿಡ್ ಸೋಂಕು ಪ್ರಕರಣಗಳು ದೃಢವಾಗಿದ್ದು, 920 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಮುಂಬೈನಲ್ಲಿ 3879 ಪ್ರಕರಣಗಳು ದೃಢವಾಗಿದ್ದರೆ, 77 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಪುಣೆಯಲ್ಲಿ 9084 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 93 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬೀಡಿ ಕಟ್ಟಿ ಉಳಿಸಿದ 2 ಲಕ್ಷ ರೂಪಾಯಿಯನ್ನು ಕೋವಿಡ್ ನಿಧಿಗೆ ಕೊಟ್ಟ 63 ರ ವೃದ್ಧ.!
ಮಹಾರಾಷ್ಟ್ರದಲ್ಲೀಗ 6.41 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದ ಜಿಲ್ಲೆಗಳಾದ ಮುಂಬೈ, ಔರಂಗಾಬಾದ್, ಥಾಣೆ, ನಾಸಿಕ್, ರಾಯ್ಗಡ್, ಲಾತೂರ್, ಅಮರಾವತಿ, ನಂಡೇದ್, ಧುಲೆ, ಭಂಡಾರಾ, ನಂದುರ್ಬರ್, ಒಸ್ಮಾನ್ ಬಾದ್, ಚಂದ್ರಾಪುರ್ ಮತ್ತು ಗೊಂಡಿಯಾ ಗಳಲ್ಲಿ ಕೋವಿಡ್ ಪ್ರಮಾಣ ಇಳಿಕೆಯಾಗುತ್ತಿದೆ.
ಮುಂಬೈನಲ್ಲಿ ಎಪ್ರಿಲ್ 4ರಂದು 11,163 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ನಂತರ ಈ ಪ್ರಮಾಣ ಇಳಿಮುಖವಾಗಿದೆ.