Advertisement

ಅವನತಿಯತ್ತ ಲೋನಾರ್‌ ಲೇಕ್‌

06:20 AM Sep 02, 2017 | |

ಮುಂಬಯಿ: ಸುಮಾರು 50 ಸಾವಿರ ವರ್ಷಗಳ ಸುದೀರ್ಘ‌ ಇತಿಹಾಸ ಹೊಂದಿರುವ ಮಹಾರಾಷ್ಟ್ರದ ಬುಲಾœನಾ ಜಿಲ್ಲೆಯ ಲೋನಾರ್‌ ಲೇಕ್‌ ಕ್ರಮೇಣ ಮುಚ್ಚಿಹೋಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

Advertisement

50 ಸಹಸ್ರ ವರ್ಷಗಳ ಹಿಂದೆ ಉಲ್ಕೆ ಯೊಂದು ಅಪ್ಪಳಿಸಿದ್ದರಿಂದ ಉಂಟಾಗಿದ್ದ ಲೋನಾರ್‌ ಕೆರೆ, 1.2 ಕಿ.ಮೀ ವ್ಯಾಪ್ತಿ ಹೊಂದಿದ್ದು ಇದಕ್ಕೆ ರಾಷ್ಟ್ರೀಯ ಪಾರಂಪರಿಕ ಸ್ಮಾರಕದ ಮಾನ್ಯತೆ ದೊರೆತಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಕೆರೆಯ 100 ಮೀಟರ್‌ನಷ್ಟು ಭಾಗ ಮುಚ್ಚಿಹೋಗಿದೆ ಎಂದು ಪುಣೆ ಮೂಲದ ಸೆಂಟರ್‌ ಫಾರ್‌ ಸಿಟಿಜನ್‌ ಸೈನ್ಸ್‌ನ (ಸಿಸಿಎಸ್‌) ಸಂಶೋಧ ಕರು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಸುತ್ತಮುತ್ತಲ ನಿವಾಸಿಗಳು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಕೆರೆ ನೀರನ್ನು ಬಳಸುತ್ತಿರುವ ಕಾರಣ, ಕೆರೆಯಲ್ಲಿನ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೆರೆಯ ಕುರಿತು ಸಿಸಿಎಸ್‌ ಸಂಶೋಧ ಕರು 2003ರಿಂದ ಅಧ್ಯಯನ ನಡೆಸುತ್ತಿದ್ದು, “ಕೆರೆಯ 100 ಮೀ. ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕಟ್ಟಡಗಳು ತಲೆಯೆತ್ತಿವೆ. ಅಲ್ಲದೆ ಸಾಕಷ್ಟು ಬೋರ್‌ವೆಲ್‌ಗ‌ಳನ್ನು ಕೊರೆದಿರುವುದ ರಿಂದ ಕೆರೆಗೆ ಸಮರ್ಪಕ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿಲ್ಲ,’ ಎಂದು ಸಂಶೋಧಕರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next