Advertisement

ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಕಾರಿನಿಂದ ಹಾರಿದ ತಾಯಿ: ಮಗು ಸಾವು

09:44 PM Dec 11, 2022 | Team Udayavani |

ಮುಂಬೈ: ಕ್ಯಾಬ್‌ ಚಾಲಕನ ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು 10 ತಿಂಗಳ ಮಗು ಸಮೇತ ತಾಯಿ ಚಲಿಸುತ್ತಿರುವ ಕಾರಿನಿಂದ ಧುಮುಕಿದ್ದು, ಗಾಯಗೊಂಡ ಮಗು ಸ್ಥಳದಲ್ಲೇ ಅಸುನೀಗಿದ ಘಟನೆ ಅಹಮದಾಬಾದ್‌-ಮುಂಬೈ ಹೆದ್ದಾರಿಯಲ್ಲಿ ನಡೆದಿದೆ.

Advertisement

ಈ ಸಂಬಂಧ ಮಹಾರಾಷ್ಟ್ರದ ವಿರಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಪೆಲ್ಹಾರ್‌ನ ನಿವಾಸಿಯಾಗಿರುವ 19 ವರ್ಷದ ಮಹಿಳೆ, ಮಗುವಿನೊಂದಿಗೆ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ಲೈಂಗಿಕ ದೌರ್ಜನ್ಯನಿಂದ ತಪ್ಪಿಸಿಕೊಳ್ಳಲು ಕಾರಿನಿಂದ ಹಾರಿರುವುದಾಗಿ ಆಕೆ ವಿಚಾರಣೆ ವೇಳೆ ತಿಳಿಸಿದ್ದಾರೆ. ಆದರೆ ಆಕೆ ಪದೇ ಪದೆ ಹೇಳಿಕೆ ಬದಲಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯನ್ನು ಪೊಲೀಸರು ಪಾಲಕರಿಗೆ ಒಪ್ಪಿಸಿದ್ದಾರೆ.ಆದರೆ, ಮಹಿಳೆ ತನ್ನ ಗಂಡನೊಂದಿಗೆ ಮಾತನಾಡಲು ಮೊಬೈಲ್‌ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಕೆಯ ಕೈನಿಂದ ಜಾರಿ ಮಗು ಕಿಟಿಕಿಯ ಹೊರಗೆ ಬಿದ್ದಿತು ಎಂದು ಕಾರಿನ ಚಾಲಕ ಹೇಳಿದ್ದಾರೆ. ಸತ್ಯ ತಿಳಿಯಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next