Advertisement
ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಮಾ. 20ರಂದು ಸಂಜೆ ನಾಮಫಲಕ ಅನಾವರಣಗೊಳಿಸಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಮಹಾರಾಷ್ಟ್ರ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರು ಒಂದಾಗಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ-ಬೆಳೆಸಲು ಪಣ ತೊಡೋಣ ಎಂದರು.
Related Articles
Advertisement
ಸರ್ವರ ಪ್ರಶಂಸೆಗೆ ಪಾತ್ರವಾದ ಕಾರ್ಯಕ್ರಮ :
ಕರ್ನಾಟಕದ ಜಾನಪದ ಕಲೆಯನ್ನು ರಂಗದ ಮೇಲೆ ಸಾûಾತ್ಕರಿಸಿದ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕವು ಜನಮನದ ಆಶೋತ್ತರ ಗಳಿಗೆ ಸ್ಪಂದಿಸಿದ ಪರಿ ಅನನ್ಯವಾಗಿತ್ತು. ಘಟಕದ ಅಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಅವರ ಸದ್ಗುಣತೆ, ತೆರೆಮರೆಯ ಕೊಡುಗೆಗೆ ಸಭಾಗೃಹ ತುಂಬಿ ತುಳುಕುವಂತೆ ಮಾಡಿದ ಮುಂಬಯಿ ತುಳು-ಕನ್ನಡಿಗರ ಪ್ರೋತ್ಸಾಹ ಅಪಾರವಾಗಿತ್ತು. ವಿಶೇಷವೆಂದರೆ ಸಂಪೂರ್ಣ ಕಾರ್ಯಕ್ರಮವು ಸಮಯಕ್ಕೆ ಅನುಗುಣವಾಗಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಪ್ರಸಿದ್ಧ ವಾಗ್ಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಯಕ್ಷಗಾನ ಅರ್ಥಧಾರಿ ಜಬ್ಟಾರ್ ಸಮೋ, ಲೆಕ್ಕಪರಿಶೋಧಕ ಪ್ರವೀಣ್ ಭೋಜ ಶೆಟ್ಟಿ ಅವರ ಮಾತುಗಳು ಭಾಗವಹಿಸಿದ್ದವರನ್ನು ಮಂತ್ರಮುಗ್ಧಗೊಳಿಸಿತು. ಡಾ| ಆರ್. ಕೆ. ಶೆಟ್ಟಿ ಅವರ ತಂಡದ ಶ್ರದ್ಧೆ, ಪರಿಶ್ರಮ, ಪ್ರಮಾಣಿಕತೆ ಗಣ್ಯರ ಪ್ರಶಂಸೆಗೆ ಪಾತ್ರವಾಯಿತು.
ಕರ್ತವ್ಯವೇ ಧರ್ಮ ಸಂಗಮವಾಗಿದ್ದು, ಜಾನಪದದ ಹೆಸರಲ್ಲಿ ಸಾಧಕರ ಸಾಮರ್ಥ್ಯ ಮೇಳೈಸಿ ಸಂಕಲ್ಪ ಸಿದ್ಧಿಯಾಗುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಭಾರತೀಯರ ಬಾಂಧವ್ಯಕ್ಕೆ ಜಾನಪದವೂ ಒಂದು ಶಕ್ತಿಯಾಗಿದ್ದು, ಮಕ್ಕಳಿಗೆ ಬುದ್ಧಿ ತಿಳಿಹೇಳುವ ಜಾನಪದ ಮನಪರಿವರ್ತನ ಶಕ್ತಿ ಹೊಂದಿದೆ. ನಮ್ಮ ಪೂರ್ವಜರು ಜಾನಪದದ ಮೂಲಕ ಬದುಕು ಕಟ್ಟಿಕೊಂಡು ನಮಗೆ ಅನುಭವದ ಸಾಹಿತ್ಯ ಕಟ್ಟಿಕೊಟ್ಟು ಜಾನಪದವನ್ನು ವರವನ್ನಾಗಿಸಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಪಸರಿಸಿ ಬಂದಿರುವ ಶ್ರೇಷ್ಠ ಕಲೆ ಇದಾಗಿದ್ದು, ಯುವ ಜನಾಂಗಕ್ಕೆ ಜಾನಪದವನ್ನು ಹಸ್ತಾಂತರಿಸಲು ಇಂತಹ ಸಂಸ್ಥೆಗಳ ಪರಿಶ್ರಮದಿಂದ ಸಾಧ್ಯವಾಗಲಿ.-ಗುರ್ಮೆ ಸುರೇಶ್ ಶೆಟ್ಟಿ ಉದ್ಯಮಿ, ಸಮಾಜ ಸೇವಕರು, ಸಾಹಿತಿ
ಜಾನಪದ ಎಂದರೇನು, ಯಾಕೆ ಉಳಿಸಿ ಬೆಳೆಸಬೇಕು, ಜಾನಪದದಿಂದ ಏನಾಗುತ್ತದೆ ಎನ್ನುವವರಿಗೆ ಈ ಉತ್ಸವ ಉತ್ತರ ನೀಡಿದೆ. ನಮ್ಮ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಯುವ ಜನಾಂಗಕ್ಕೆ ಪರಿಚಯಿಸಿ, ಮುಂದಿನ ಹಂತಕ್ಕೆ ಕೊಂಡೊಯ್ಯುವ ಉದ್ದೇಶ ನಮ್ಮದಾಗಿದೆ. ಮುಂದೆ ಮಹಾರಾಷ್ಟ್ರದಾದ್ಯಂತ ಇದನ್ನು ವಿಸ್ತರಿಸುವ ಪ್ರಯತ್ನ ಮಾಡಲಿದ್ದೇವೆ. ಟಿ. ತಿಮ್ಮೇಗೌಡ ಅವರು ನೀಡಿದ ಜವಾಬ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲಿದ್ದೇವೆ.-ಡಾ| ಆರ್. ಕೆ. ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕ
ಒಂದು ತಲೆಮಾರಿನ ಸಾಮಾಜಿಕ, ಚಾರಿತ್ರಿಕ ಸಂಗತಿಗಳ ಮರು ಮನನ, ಸೃಷ್ಟೀಕರಣವನ್ನು ಪುನರ್ ಕಟ್ಟುವ ಕೆಲಸವನ್ನು ಮಾಡಬೇಕಾದ ಅನಿವಾರ್ಯವಿದೆ. ಮಹಾರಾಷ್ಟ್ರದಲ್ಲಿನ ಮಕ್ಕಳು ಜಾನಪದದ ಪ್ರಜ್ಞೆ ಮೂಡಿಸಿರುವುದು ನಿಜಕ್ಕೂ ಅಭಿನಂದನೀಯ. ಇದು ಕಲಾಸಕ್ತ ಆಸ್ತಿಕರಿಗೆ ಉತ್ತೇಜನ ಮತ್ತು ಬೆನ್ನೆಲುಬುವಿನ ಪಾಠವಾಗಿದೆ. ಜಾಗತೀಕರಣಕ್ಕೆ ಪ್ರಬಲವಾದ ಪೈಪೋಟಿಯನ್ನು ಕೊಡಬಲ್ಲ ಕಲಾಪ್ರಕಾರವಿದ್ದರೆ ಅದು ಯಕ್ಷಗಾನ ಮಾತ್ರ. ಇಂತಹ ಕಲೆಯ ಭೌತಿಕವಾದ ಸಾಹಿತ್ಯವನ್ನು ತಂತ್ರಜ್ಞಾನದ ಲೈವ್ ಬದಲಾಗಿ ಪ್ರತ್ಯಕ್ಷವಾಗಿ ಪ್ರದರ್ಶಿಸುವ ಪ್ರಯತ್ನ ನಡೆಯಬೇಕು.-ಜಬ್ಬಾರ್ ಸಮೋ ಸಂಪಾಜೆ ಪ್ರಸಿದ್ಧ ಯಕ್ಷಗಾನ ಅರ್ಥಧಾರಿ
ಚಿತ್ರ-ವರದಿ : ರೋನ್ಸ್ ಬಂಟ್ವಾಳ್