Mangaluru: ಕರ್ನಾಟಕ ಕ್ರೀಡಾಕೂಟಕ್ಕೆ 5 ಕೋ.ರೂ.: ಮುಲ್ಲೈ ಮುಗಿಲನ್‌


Team Udayavani, Jan 15, 2025, 10:54 PM IST

Mangaluru: ಕರ್ನಾಟಕ ಕ್ರೀಡಾಕೂಟಕ್ಕೆ 5 ಕೋ.ರೂ.: ಮುಲ್ಲೈ ಮುಗಿಲನ್‌

ಮಂಗಳೂರು: ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾಡಳಿತಗಳ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ “ಕರ್ನಾಟಕ ಕ್ರೀಡಾಕೂಟ’ಕ್ಕೆ 2024-25ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ.ಗಳನ್ನು ಸರಕಾರ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಾ ಕ್ರೀಡಾಂಗಣದಲ್ಲಿ ಜ. 17ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಸಮಾರೋಪ ಸಮಾರಂಭ ಜ. 23ರಂದು ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಕಳೆದ ವರ್ಷ ದಸರಾ ಕ್ರೀಡಾ ಕೂಟದ ಜತೆಗೆ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ವರ್ಷದಿಂದ ಪ್ರತ್ಯೇಕವಾಗಿ ಕರ್ನಾಟಕ ಕ್ರೀಡಾಕೂಟ ಹೆಸರಿನಲ್ಲಿ ಆಯ್ದ ಉನ್ನತ ಮಟ್ಟದ ಕ್ರೀಡಾಪಟುಗಳೊಂದಿಗೆ ಒಲಿಂಪಿಕ್‌ ಮಾದರಿಯಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳ ಸಮಗ್ರ ಮಾಹಿತಿಯೊಂದಿಗೆ, ಫ‌ಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆಟಗಾರರಿಗೆ ಕ್ಯೂಆರ್‌ ಕೋಡ್‌ ಹೊಂದಿರುವ ಐಡಿ ಕಾರ್ಡ್‌ ವಿತರಿಸುವ ವ್ಯವಸ್ಥೆಯಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.

ಕರ್ನಾಟಕ ಕ್ರೀಡಾಕೂಟ 2025ರ ವಿಶೇಷ ಆಕರ್ಷಣೆಯಾಗಿ ಉದ್ಘಾಟನ ಸಮಾರಂಭದ ವೇಳೆ ಮಂಗಳಾ ಕ್ರೀಡಾಂಗಣದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಆಯೋ ಜಿಸಲಾಗಿದೆ.

ಜಿ.ಪಂ. ಸಿಇಒ ಡಾ| ಆನಂದ್‌, ಯುವ ಜನ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್‌ ಡಿ’ ಸೋಜಾ, ಮನಪಾ ಆಯುಕ್ತ ಆನಂದ್‌ ಸಿ.ಎಲ್‌ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಜ್ಜಾಗುತ್ತಿದೆ ಮಂಗಳೂರು
ಕರ್ನಾಟಕ ಕ್ರೀಡಾಕೂಟಕ್ಕೆ ಮಂಗಳೂರು ಸಜ್ಜಾಗುತ್ತಿದೆ. ದ.ಕ. ಜಿಲ್ಲಾಡಳಿತ, ಜಿಲ್ಲಾ ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ಇಲಾಖೆಗಳ ಸಹಕಾರದಿಂದ ತಯಾರಿಗಳು ಪೂರ್ಣಗೊಳ್ಳುತ್ತಿವೆ.

ಉದ್ಘಾಟನಾ ಸಮಾರಂಭ ನಡೆಯಲಿರುವ ಮಂಗಳಾ ಕ್ರೀಡಾಂಗಣ ವನ್ನು ಅಭಿವೃದ್ಧಿ ಗೊಳಿಸ ಲಾಗುತ್ತಿದ್ದು, ಸ್ವತ್ಛಗೊಳಿಸಿ ಗ್ಯಾಲರಿಗೆ ಬಣ್ಣ ಬಳಿದು ಆಕರ್ಷಣೆ ಗೊಳಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಾಕಿಂಗ್‌ ಟ್ರಾÂಕ್‌, ಲೈಟಿಂಗ್‌ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಮಂಗಳೂರು ಮಹಾ ನಗರ ಪಾಲಿಕೆಯ ಮೂಲಕ ಕ್ರೀಡಾ ಪಟು ಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಮಂದಿ, ಮೂರು ಮಂದಿ ಉಳಿದುಕೊಳ್ಳುವ ಕೊಠಡಿಗಳನ್ನು ಕಾದಿರಿಸಲಾಗಿದ್ದು, ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಮಾರು 20ಕ್ಕೂ ಅಧಿಕ ಹೊಟೇಲ್‌ಗ‌ಳನ್ನು ಕಾಯ್ದಿರಿಸಲಾಗಿದೆ.

ಬೆಂಗಳೂರಿನ ತಂಡದ ಮೂಲಕ ಕ್ರೀಡಾಪಟುಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲೇ ಬೇಕಾದ ಆಹಾರಗಳನ್ನು ತಯಾರಿಸಿ ಬಿಸಿಬಿಸಿಯಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿ ವೀಕ್ಷಣೆ
ಕರ್ನಾಟಕ ಕ್ರೀಡಾಕೂಟದ ಸಿದ್ಧತೆಗಳನ್ನು ಮಂಗಳಾ ಕ್ರೀಡಾಂ ಗಣ ದಲ್ಲಿ ಜಿಲ್ಲಾಧಿಕಾರಿ ಮುಲ್ಲೆ   ç ಮುಗಿಲನ್‌ ಅವರು ಬುಧವಾರ ವೀಕ್ಷಿಸಿದರು. ಈ ವೇಳೆ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌., ಡಿಸಿಪಿ ಸಿದ್ದಾರ್ಥ್ ಗೋಯಲ್‌, ಕ್ರೀಡಾಧಿ ಕಾರಿ ಪ್ರದೀಪ್‌ ಡಿ”ಸೋಜಾ ಸಹಿತ ಮತ್ತಿತರ ಅಧಿಕಾರಿ ಗಳು ಇದ್ದರು.
**
ಉಡುಪಿ: ಕರ್ನಾಟಕ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಪುನರ್‌ ಜೋಡಣೆಯ ಜತೆಗೆ ಪ್ರೇಕ್ಷಕರ ಗ್ಯಾಲರಿ ದುರಸ್ತಿ, ಸ್ವತ್ಛತೆ ಕಾರ್ಯ ನಡೆಯುತ್ತಿದೆ. ಬಾಕ್ಸಿಂಗ್‌, ಟೆನಿಸ್‌, ಅರ್ಚರಿ, ಜೂಡೋ ಮೊದಲಾದ ಕ್ರೀಡೆಗೆ ಅಗತ್ಯವಾಗಿ ಬೇಕಿರುವ ಕೋರ್ಟ್‌, ಪರಿಕರ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಆ್ಯತ್ಲೆಟಿಕ್‌ಗೆ ಸಿಂಥೆಟಿಕ್‌ ಕೋರ್ಟ್‌ ರಚನೆ ಹಾಗೂ ಟ್ರ್ಯಾಕ್‌ಗೆ ಪೇಂಟಿಂಗ್‌ ಕೂಡ ಮಾಡಲಾಗುತ್ತಿದೆ. ಕಯಾಕಿಂಗ್‌ ಮತ್ತು ಕನೋಯಿಂಗ್‌ ನಡೆಯುವ ಬ್ರಹ್ಮಾವರ ಸ್ವರ್ಣಾ ನದಿ ತಟದಲ್ಲಿ ಕ್ರೀಡೆಗೆ ಬೇಕಾದ ಪರಿಕರಗಳ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಉಪ್ಪೂರು ಸ. ಪ್ರೌಢ ಶಾಲೆ ಆವರಣದಲ್ಲಿ ಸೈಕ್ಲಿಂಗ್‌ಗೆ ಬೇಕಾದ ಟ್ರ್ಯಾಕ್‌, ಮಾರ್ಕಿಂಗ್‌ ಇತ್ಯಾದಿ ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್‌ಪಿ ಡಾ| ಕೆ.ಅರುಣ್‌ ಸಹಿತ ಜಿಲ್ಲೆಯ ಹಿರಿಯ ಅಧಿಕಾರಿಗಳು ಕ್ರೀಡಾಳುಗಳು ಹಾಗೂ ಅಧಿಕಾರಿಗಳಿಗೆ ವ್ಯವಸ್ಥೆ ಮಾಡಲಾದ ಹಾಸ್ಟೆಲ್‌ಗ‌ಳ ಪರಿವೀಕ್ಷಣೆ ಕಾರ್ಯ ನಡೆಸುತ್ತಿದ್ದಾರೆ. ಜ. 16ರ ಸಂಜೆ ಹಾಗೂ ಜ. 17ರ ಬೆಳಗ್ಗೆ ಬಹುತೇಕ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ.

ಟಾಪ್ ನ್ಯೂಸ್

Udupi: ಪ್ರತಿಷ್ಠಿತ ವಸತಿ ಶಾಲೆಗೆ ಬಾಂಬ್‌ ಬೆದರಿಕೆ; ಪೊಲೀಸ್‌ ಪರಿಶೀಲನೆ

MUDA Case: ED notice to CM Siddaramaiah’s wife, Minister Byrati

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ, ಸಚಿವ ಬೈರತಿಗೆ ಇಡಿ ನೋಟಿಸ್

Stock Market: ಜಾಗತಿಕ ಬೆಳವಣಿಗೆ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 800 ಅಂಕ ಕುಸಿತ!

Stock Market: ಜಾಗತಿಕ ಬೆಳವಣಿಗೆ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 800 ಅಂಕ ಕುಸಿತ!

GBS: First suspected demise of Guillain-Barre Syndrome in Maharashtra; concerns grow

GBS: ಮಹಾರಾಷ್ಟ್ರದಲ್ಲಿ ಮೊದಲ ಗೀಲನ್‌ ಬಾರ್‌ ಸಿಂಡ್ರೋಮ್‌ ಶಂಕಿತ ಸಾವು; ಹೆಚ್ಚಿದ ಆತಂಕ

ಎಟಿಎಂನಲ್ಲಿ ಕಳ್ಳತನ ನಡೆಸಲು ಯತ್ನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ

Shimoga: ಎಟಿಎಂನಲ್ಲಿ ಕಳ್ಳತನ ನಡೆಸಲು ಯತ್ನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ

NavIC ಶಕ್ತಿ ವೃದ್ಧಿಸಲಿದೆ NVS-02: ಇಸ್ರೋ ಶತಕದ ಸಾಧನೆ ನಿರ್ಮಿಸಲಿದೆ ಜಿಎಸ್ಎಲ್‌ವಿ ಎಫ್15

NavIC ಶಕ್ತಿ ವೃದ್ಧಿಸಲಿದೆ NVS-02: ಇಸ್ರೋ ಶತಕದ ಸಾಧನೆ ನಿರ್ಮಿಸಲಿದೆ ಜಿಎಸ್ಎಲ್‌ವಿ ಎಫ್15

ಹೊಸ ಅಧ್ಯಾಯದೊಂದಿಗೆ ಮುಗಿಯಿತು ಕಿಚ್ಚನ ನಿರೂಪಣೆ ಜರ್ನಿ.. ಇವರು ಆಗ್ತಾರಾ ಮುಂದಿನ ಹೋಸ್ಟ್?

ಹೊಸ ಅಧ್ಯಾಯದೊಂದಿಗೆ ಮುಗಿಯಿತು ಕಿಚ್ಚನ ನಿರೂಪಣೆ ಜರ್ನಿ.. ಇವರು ಆಗ್ತಾರಾ ಮುಂದಿನ ಹೋಸ್ಟ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Editorial: ವಾರ್ಡ್‌ಗೊಂದು ಪಾರ್ಕ್‌ ನಿರ್ಮಾಣವಾಗಲಿ

Kotekar-Robb1

Kotekar Robbery: ಚಿನ್ನಾಭರಣಗಳ ಸಹಿತ ನಾಲ್ಕನೇ ಆರೋಪಿ ಮಂಗಳೂರಿಗೆ

Kotekar-Robb-Police

Kotekar Robbery: ಸೂತ್ರಧಾರನ ಸೆರೆಗೆ ಮತ್ತೆರಡು ತಂಡ ಮುಂಬಯಿಗೆ ಪಯಣ

Mgn-Republic

Republic Day: ಸಮಾಜದಲ್ಲಿರುವ ದುಷ್ಟ ಶಕ್ತಿಗಳ ಸಮಾಜವೇ ಬಹಿಷ್ಕರಿಸಲಿ: ಉಸ್ತುವಾರಿ ಸಚಿವ

Aalvas-republic

Republic Day: ಸಂವಿಧಾನ ಬದ್ಧ ಕರ್ತವ್ಯ- ಹಕ್ಕು ಪಾಲಿಸುವ ಸಂಕಲ್ಪ ದಿನ: ಬಸವರಾಜ ಹೊರಟ್ಟಿ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Udupi: ಪ್ರತಿಷ್ಠಿತ ವಸತಿ ಶಾಲೆಗೆ ಬಾಂಬ್‌ ಬೆದರಿಕೆ; ಪೊಲೀಸ್‌ ಪರಿಶೀಲನೆ

MUDA Case: ED notice to CM Siddaramaiah’s wife, Minister Byrati

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ, ಸಚಿವ ಬೈರತಿಗೆ ಇಡಿ ನೋಟಿಸ್

2

Editorial: ವಾರ್ಡ್‌ಗೊಂದು ಪಾರ್ಕ್‌ ನಿರ್ಮಾಣವಾಗಲಿ

1

Editorial: ಕಾಳ್ಗಿಚ್ಚು ನಿಯಂತ್ರಣ; ವ್ಯಾಪಕ ಜಾಗೃತಿ, ಮುಂಜಾಗ್ರತೆ ಇರಲಿ

Stock Market: ಜಾಗತಿಕ ಬೆಳವಣಿಗೆ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 800 ಅಂಕ ಕುಸಿತ!

Stock Market: ಜಾಗತಿಕ ಬೆಳವಣಿಗೆ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 800 ಅಂಕ ಕುಸಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.