ಪುಣೆ : ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನಾ ನಿರತ ಪಿಎಫ್‌ಐ ಕಾರ್ಯಕರ್ತರು ದೇಶ ವಿರೋಧಿ ‘ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ್ದಾರೆ.
ಸಂಘಟನೆಯ ವಿರುದ್ಧ ದೇಶದ ವಿವಿಧೆಡೆ ಇಡಿ-ಸಿಬಿಐ-ಪೊಲೀಸ್ ದಾಳಿಗಳ ವಿರುದ್ಧ ಜಮಾಯಿಸಿದ ಪಿಎಫ್‌ಐ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ವೇಳೆ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನೂ ಓದಿ : 24ಗಂಟೆಯಲ್ಲಿ 3 ಪ್ರಕರಣ; ಚೆನ್ನೈನಲ್ಲಿ ಆರ್ ಎಸ್ ಎಸ್ ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಲವು ಕಾರ್ಯಕರ್ತರನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಪ್ರತಿಭಟನೆಯಲ್ಲಿ ಕೂಗಲಾದ ಎಲ್ಲಾ ಘೋಷಣೆಗಳ ಬಗ್ಗೆ ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.