Advertisement
ಪಂಕಜಾ ಮುಂಢೆ ಸೇರಿದಂತೆ 5 ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದರೆ, ಶಿಂಧೆ ಶಿವಸೇನೆ ಮತ್ತು ಅಜಿತ್ ಪವಾರ್ ಎನ್‌ಸಿಪಿ ತಲಾ ಇಬ್ಬರನ್ನು ಕಣಕ್ಕಿಳಿಸಿತ್ತು. ಈ ಎಲ್ಲ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮತ್ತೂಂದೆಡೆ ಮಹಾ ವಿಕಾಸ್ ಅಘಾಡಿಯ ಕಾಂಗ್ರೆಸ್, ಉದ್ಧವ್ ಶಿವಸೇನೆ ಮತ್ತು ಶರದ್ ಪವಾರ್ ಎನ್‌ಸಿಪಿ ತಲಾ ಒಬ್ಬೊಬ್ಬರನ್ನು ಕಣಕ್ಕಿಳಿಸಿತ್ತು. ಈ ಪೈಕಿ ಕಾಂಗ್ರೆಸ್ ಹಾಗೂ ಉದ್ಧವ್ ಶಿವಸೇನೆ ಅಭ್ಯರ್ಥಿಗಳು ಗೆಲುವು ಕಂಡರೆ, ಶರದ್ ಎನ್‌ಸಿಪಿ ಬೆಂಬಲಿತ ಪೆಸೆಂಟ್ಸ್ ಆ್ಯಂಡ್ ವರ್ಕ್ಸ್ ಪಾರ್ಟಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಎಂಎಲ್‌ಸಿ ಚುನಾವಣೆಯನ್ನು ಸೆಮಿಫೈನಲ್ ಎಂದು ಕರೆಯಲಾಗುತ್ತಿತ್ತು. ಅಡ್ಡ ಮತದಾನ ತಪ್ಪಿಸುವುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಶಾಸಕರನ್ನು ಹೊಟೇಲ್‌ಗಳಿಗೆ ಸ್ಥಳಾಂತರಿಸಿದ್ದವು.
ಚುನಾವಣೆಗೂ ಮುಂಚೆ ಅಜಿತ್ ನೇತೃತ್ವದ ಎನ್‌ಸಿಪಿ ಶಾಸಕರು ವಿಪಕ್ಷಗಳ ಅಭ್ಯರ್ಥಿಗಳಿಗೆ ಅಡ್ಡಮತದಾನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ವಾಸ್ತವದಲ್ಲಿ ಕಾಂಗ್ರೆಸ್‌ನ 7 ಶಾಸಕರು ಆಡಳಿತ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿರುವುದು ಆರಂಭದ ಮಾಹಿತಿಯಲ್ಲಿ ತಿಳಿದು ಬಂದಿದೆ.