Advertisement

ಅತ್ಯಾಚಾರ ಆರೋಪ ಸುಳ್ಳು, ಮಹಿಳೆ ಸಹೋದರಿ ಜತೆ ಸಂಬಂಧ ಇದೆ: ಮಹಾರಾಷ್ಟ್ರ ಸಚಿವ

11:54 AM Jan 13, 2021 | Team Udayavani |

ಮುಂಬೈ:ತನ್ನ ಮೇಲೆ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪವನ್ನು ಮಹಾರಾಷ್ಟ್ರದ ಸಾಮಾಜಿಕ ಮತ್ತು ನ್ಯಾಯ ಖಾತೆ ಸಚಿವ ಧನಂಜಯ್ ಮುಂಡೆ ಅಲ್ಲಗಳೆದಿದ್ದು, ತಾನು ಆಕೆಯ ಸಹೋದರಿ ಜತೆ 2003ರಿಂದ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ.

Advertisement

ಈ ಬಗ್ಗೆ ಎನ್ ಸಿಪಿ ಮುಖಂಡ ಮುಂಡೆ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ದೂರು ನೀಡಿದ ಮಹಿಳೆ ಮತ್ತು ಆಕೆಯ ಸಹೋದರಿ ನನ್ನನ್ನು ಬ್ಯ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದು, ತನ್ನಿಂದ ಹಣ ಲೂಟಿ ಮಾಡಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ 2020ರ ನವೆಂಬರ್ ನಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ತಾನು ದೂರು ನೀಡಿದ ಮಹಿಳೆಯ ಸಹೋದರಿ ಜತೆ 2003ರಿಂದಲೂ ಸಂಬಂಧ ಹೊಂದಿದ್ದು, ಇಬ್ಬರು ಮಕ್ಕಳಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು ಆಕೆಯ ಕುಟುಂಬದವರು ಒಪ್ಪಿಕೊಂಡಿರುವುದಾಗಿ ಮುಂಡೆ ತಿಳಿಸಿದ್ದಾರೆ.

ಈ ಸಂಬಂಧವನ್ನು ಸಚಿವ ಮುಂಡೆ ಬಹಿರಂಗವಾಗಿ ಒಪ್ಪಿಕೊಂಡ ನಂತರ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕ, ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು, ಕೂಡಲೇ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದೆ.

ಇದನ್ನೂ ಓದಿ:ಸಂಪುಟ ಸಂಕ್ರಾಂತಿ: ಯಾರಿಗೆ ಸಿಹಿ- ಯಾರಿಗೆ ಕಹಿ? ಇಲ್ಲಿದೆ ನೂತನ ಸಚಿವರ ಸಂಪೂರ್ಣ ಪಟ್ಟಿ

Advertisement

ಜನವರಿ 11ರಂದು ಮಹಿಳೆ ಮತ್ತು ಆಕೆಯ ಪರ ವಕೀಲರು ಅಂಧೇರಿಯ ಓಹೀವಾರಾ ಪೊಲೀಸ್ ಠಾಣೆಗೆ ಆಗಮಿಸಿ ಧನಂಜಯ್ ಮುಂಡೆ ವಿರುದ್ಧ ದೂರು ದಾಖಲಿಸಿದ್ದರು. ತನಗೆ ಧನಂಜಯ್ ಮುಂಡೆ 1997ರಿಂದಲೂ ಪರಿಚಯ ಇರುವುದಾಗಿ ದೂರಿನಲ್ಲಿ ದಾಖಲಿಸಿರುವುದಾಗಿ ವರದಿ ಹೇಳಿದೆ.

ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಧನಂಜಯ್ ಮುಂಡೆ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದು, ಅಷ್ಟೇ ಅಲ್ಲ ಬಾಲಿವುಡ್ ನಲ್ಲಿ ಗಾಯಕಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next