Advertisement

ಮಹಾರಾಷ್ಟ್ರ ಕೋವಿಡ್ ಸೋಂಕಿತರಿಗೆ ಮತ್ತೊಂದು ಶಾಕ್ : 2000 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

09:08 AM May 12, 2021 | Team Udayavani |

ಮುಂಬೈ : ಕೆಲವು ಕೋವಿಡ್‌ ಸೋಂಕಿತರಿಗೆ ಕಪ್ಪು ಶಿಲೀಂಧ್ರ ಸೋಂಕು ಅಂದರೆ ಮ್ಯೂಕೋರ್‌ಮೈಕೋಸಿಸ್ ಎಂಬ ಅಪರೂಪದ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ವೈದ್ಯರಲ್ಲೇ ಆತಂಕ ಮೂಡಿಸಿದೆ.

Advertisement

ಈ ಕಾರಣದಿಂದ ಮುಂಬೈನ ವೈದ್ಯಕೀಯ ಕಾಲೇಜುಗಳನ್ನು ಮ್ಯೂಕೋರ್ಮೈಕೋಸಿಸ್ ಚಿಕಿತ್ಸಾ ಕೇಂದ್ರಗಳಾಗಿ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.  ಕೋವಿಡ್ ಸೋಂಕಿತರ ಮೇಲೆ ಮ್ಯೂಕೋರ್ಮೈಕೋಸಿಸ್ ಸೋಂಕು ಹೆಚ್ಚಾಗುತ್ತಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಕಪ್ಪು ಶಿಲೀಂಧ್ರ ಎಂದೂ ಕೂಡ  ಮ್ಯೂಕೋರ್ಮೈಕೋಸಿಸ್ ಕಾಯಿಲೆಯನ್ನು ಕರೆಯುತ್ತಾರೆ. ಈ ಸೋಂಕು ತಗುಲಿದರೆ ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ದೃಷ್ಟಿ ಹೀನತೆ ಕಂಡುಬರುತ್ತದೆ. ಮಹಾರಾಷ್ಟ್ರ ರಾಜ್ಯದಲ್ಲಿ ಸದ್ಯ 2000 ಮ್ಯೂಕೋರ್‌ಮೈಕೋಸಿಸ್ ಪ್ರಕರಣಗಳು ಕಂಡುಬಂದಿವೆ. ಇನ್ನು ಮುಂದೆ ಕೋವಿಡ್ ಸೋಂಕಿನ ಪ್ರಮಾಣ ಕೂಡ ಜಾಸ್ತಿಯಾಗುವುದರಿಂದ ಆತಂಕಕ್ಕೆ ಕಾರಣವಾಗಿದೆ ಎಂದು ರಾಜೇಶ್ ಟೋಪೆ ತಿಳಿಸಿದ್ದಾರೆ.

ಮುಕಾರ್ಮೈಕೋಸಿಸ್ ರೋಗಿಗಳ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಯಾಕಂದ್ರೆ ಈ ಕಾಲೇಜುಗಳಲ್ಲಿ ಬಹುಶಿಸ್ತೀಯ ವಿಧಾನವನ್ನು ಬಯಸಲಾಗುತ್ತದೆ ಎಂದು ಶ್ರೀ ಟೊಪೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next