Advertisement

ಮದುವೆಯಾಗಲಿದ್ದ ಯುವತಿಯನ್ನೇ ಕೊಂದ ಯುವಕ!

11:47 PM Feb 19, 2023 | Team Udayavani |

ಜಾಲ್ನ: ವ್ಯಕ್ತಿಯೊಬ್ಬ ತಾನು ಮದುವೆಯಾಗಬೇಕಿದ್ದ ಯುವತಿಯನ್ನೇ ಅತ್ಯಾಚಾರ ವೆಸಗಿ ಕೊಂದಿರುವ ಘಟನೆ ಮಹಾರಾಷ್ಟ್ರದ ಜಾಲ್ನದಲ್ಲಿ ನಡೆದಿದೆ. ಈಚೆಗೆ ದಿಲ್ಲಿಯಲ್ಲಿ ನಡೆದಿದ್ದ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Advertisement

ಆರೋಪಿ 24 ವರ್ಷದವ ನಾಗಿದ್ದು, ಬುಲ್ದಾನಾ ಜಿಲ್ಲೆಯ ವರೂದ್‌ ನಿವಾಸಿ ಹಾಗೂ ಕೊಲೆಗೀಡಾದ 17ರ ಹರೆ ಯದ ಯುವತಿ ಬೆಲೂರಾ ನಿವಾಸಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯರು ನಿರ್ಧರಿಸಿದಂತೆ ಇವರ ವಿವಾಹವು ಮಾ. 17ರಂದು ನಡೆಯಲಿತ್ತು. ಈ ನಡುವೆ ಆರೋಪಿಯು ಯುವತಿಯ ಮನೆಗೆ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿ ಗಂಟಲು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಯಾಕಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next