ನಾಸಿಕ್: ಹನುಮಂತನ ಜನ್ಮಸ್ಥಳ ಮಹಾರಾಷ್ಟ್ರದ ನಾಸಿಕ್ ಎಂದು ಸಾಬೀತು ಪಡಿಸಲು ಮಂಗಳವಾರ ನಡೆದಿದ್ದ ಸಾಧುಗಳು ಮತ್ತು ಸಂತರ “ಧರ್ಮ ಸಂಸತ್’ ಹೊಡೆದಾಟ ನಡೆ ಯುವವರೆಗೆ ತಲುಪಿದೆ.
ಸಾಧುಗಳ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲು ಪಿತ್ತು. ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ, ಸಭೆಯನ್ನು ಮುಂದೂಡಬೇಕಾ ಯಿತು. ವಿಚಿತ್ರ ವೆಂದರೆ ಹನುಮಂತ ಜನ್ಮಸ್ಥಳದ ವಿಚಾರದ ಜತೆಗೆ ಧಾರ್ಮಿಕ ಮುಖಂಡರು ಕುಳಿತುಕೊಳ್ಳಲು ಮಾಡಿರುವ ವ್ಯವಸ್ಥೆಯ ಬಗ್ಗೆಯೇ ವಿವಾದ ತಾರಕಕ್ಕೆ ಏರಿ, ವಿಷಯಾಂತರ ವಾಯಿತು. ಜತೆಗೆ ಪೊಲೀಸರೂ ಮಧ್ಯ ಪ್ರವೇಶಿಸಿದರು. ವಿವಾದಕ್ಕೆ ಸಂಬಂಧಿಸಿ ದಂತೆ ಸಾಧುಗಳು ಮತ್ತು ಸಂತರ ಬಗ್ಗೆ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆಯೇ ಆದ್ಯತೆಯಲ್ಲಿ ಚರ್ಚೆ ಶುರು ವಾಯಿತು.
ನಾಸಿಕ್‌ನ ಕಲಾರಾಮ್ ದೇಗುಲದ ಧಾರ್ಮಿಕ ಮಹಾಂತ ಸುಧೀರ್ ದಾಸ್, “ನನ್ನನ್ನು ಕೆಲವರು ಕಾಂಗ್ರೆಸಿ’ ಎಂದು ಛೇಡಿಸುತ್ತಿದ್ದಾರೆ ಎಂದು ಮಾತು ಆರಂಭಿಸಿದರು. ಅವರ ಈ ಮಾತು ಸಾಧುಗಳ ಇನ್ನೊಂದು ಗುಂಪಿಗೆ ಕೋಪ ತರಿಸಿತು. ವಾಗ್ವಾದದ ಒಂದು ಹಂತದಲ್ಲಿ ಮಹಾಂತ ಸುಧೀರ್‌ದಾಸ್ ಮೈಕ್‌ನ ಸ್ಟಾಂಡ್‌ನಿಂದ ಹೊಡೆಯಲು ಮುಂದಾದರು.
ಅವಕಾಶ ನೀಡದ್ದಕ್ಕೆ ಕೋಪ: ಮತ್ತೊಬ್ಬ ಧಾರ್ಮಿಕ ಮುಖಂಡ ಗೋವಿಂದಾ ನಂದ ಸರಸ್ವತಿ, ತಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಪೂರಕವಾಗಿ ಅವರ ಬೆಂಬಲಿಗರೂ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಗೊಂದಲ ಏರ್ಪಟ್ಟಿತು.
ಪೊಲೀಸರ ಪ್ರವೇಶ: ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು. ಹನುಮಾನ್ ಜನ್ಮಸ್ಥಳದ ಬಗ್ಗೆ ವಾದಿಸುತ್ತಿದ್ದ ಎರಡೂ ಗುಂಪುಗಳ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ವಿಷಯಾಂತರವಾಗಿರುವ ಹಿನ್ನೆಲೆ ಯಲ್ಲಿ ಕೆಲವು ಧಾರ್ಮಿಕ ಮುಖಂಡರು “ಹನುಮಂತನ ಜನ್ಮ ಸ್ಥಾನ’ದ ಬಗ್ಗೆ ತೀರ್ಮಾನಿಸುವ ಸಭೆ ಯನ್ನು ಮುಂದೂಡುವ ನಿರ್ಧಾರ ಪ್ರಕಟಿಸಿದರು.
ಯಾರಿದ್ದರು?: ಸಭೆಯಲ್ಲಿ ಕೈಲಾಸ ಸ್ವಾಮಿ ಮಠದ ಸ್ವಾಮಿ ಸಂವಿಧಾನಂದ ಸರಸ್ವತಿ, ಪುರೋಹಿತ ಸಂಘದ ಅಧ್ಯಕ್ಷ ಸತೀಶ್ ಶುಕ್ಲಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ವಾಂಸರು ಹಾಜರಿದ್ದರು.