Advertisement

ನೀರವ್‌ ಮೋದಿ ಬಂಗಲೆ ನೆಲಸಮ?

10:14 AM Aug 22, 2018 | Team Udayavani |

ಮುಂಬೈ: ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿ ಒಡೆತನದ ಅಕ್ರಮ ಬಂಗಲೆಗಳನ್ನು ನೆಲಸಮಗೊಳಿಸಲು ಪರಿಸರ ಸಚಿವ ರಾಮದಾಸ್‌ ಕದಂ ಸೂಚಿಸಿದ್ದಾರೆ. ಮಂಗಳವಾರ ಅಕ್ರಮ ಮನೆಗಳಿಗೆ ಸಂಬಂಧಿಸಿ ನಡೆದ ಪರಿಶೀಲನಾ ಸಭೆಯಲ್ಲಿ ಅಲಿಬಾಗ್‌ನಲ್ಲಿರುವ ನೀರವ್‌ ಬಂಗಲೆ ನೆಲಸಮಗೊಳಿಸಿ ಎಂದು ರಾಯಗಡ ಜಿಲ್ಲಾಧಿಕಾರಿಗೆ ಸಚಿವರು ಆದೇಶಿಸಿದ್ದಾರೆ. 

Advertisement

ಒಟ್ಟಾರೆ ಅಲಿಬಾಗ್‌ನಲ್ಲಿ 121 ಮತ್ತು ರಾಯಗಡದಲ್ಲಿ 151 ಅಕ್ರಮ ಬಂಗಲೆಗಳಿದ್ದು, ಆ ಪೈಕಿ ಕೆಲವು ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ಸ್ಮಿತಾ ಗೋದ್ರೇಜ್‌, ಮಧುಕರ್‌ ಪರೇಖ್‌ ಮತ್ತಿತರರಿಗೆ ಸೇರಿದ್ದು ಎಂದೂ ಸಚಿವ ರಾಮದಾಸ್‌ ಹೇಳಿದ್ದಾರೆ. ಕಳೆದ ವಾರವಷ್ಟೇ ಅಕ್ರಮ ಬಂಗಲೆ ನೆಲಸಮಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ರಾಯಗಡ ಜಿಲ್ಲಾಧಿಕಾರಿಯನ್ನು ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next