ಮಹಾರಾಷ್ಟ್ರ : ಗೃಹ ಮಂತ್ರಿ ಅನಿಲ್ ದೇಶ್ ಮುಖ್ ಅವರ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಮೇಲೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಅಧಿಕಾದಲ್ಲಿ ಉಳಿಯುವ ಎಲ್ಲಾ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗ ಇಂದು(ಬುಧವಾರ. ಮಾ. 27) ರಾಜ್ಯಪಾಲರನ್ನು ಭೇಟಿ ಮಾಡಿ, ಅನಿಲ್ ದೇಶ್ ಮುಖ್ ಅವರ ಪ್ರಕರಣವನ್ನು ರಾಷ್ಟ್ರಪತಿಯವರಿಗೆ ವರದಿ ಮಾಡಬೇಕು ಅಂದು ಮನವಿ ಮಾಡಿಕೊಂಡಿದ್ದಾರೆ.
ಓದಿ : ವಿಡಿಯೋ : ಶಾಸ್ತ್ರೀಯ ಸಂಗೀತಕ್ಕೆ ಅಮ್ಮನ ಜೊತೆ ದನಿಯಾದ ಮುದ್ದು ಕಂದ
ಶರದ್ ಪವಾರ್ ಈ ಬಗ್ಗೆ ಎರಡು ಪತ್ರಿಕಾಗೋಷ್ಟಿಗಳನ್ನು ನಡೆಸಿದ್ದಾರೆ. ಅನಿಲ್ ದೇಶ್ ಮುಖ್ ಅವರನ್ನು ಪವಾರ್ ರಕ್ಷಣೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ.
ಇನ್ನು, ಈ ಬಗ್ಗೆ ಕಾಂಗ್ರೆಸ್ ನ ನಿಲುವು ಏನು ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಬೇರೆಲ್ಲಾ ವಿಚಾರಗಳಿಗೆ ಧ್ವನಿ ಎತ್ತುತ್ತದೆ. ಈ ಬಗ್ಗೆ ಮಾತಾಡಿಲ್ಲ. ಇದು ಮಹಾರಾಷ್ಟ್ರ ವಿಕಾಸ್ ಅಘಾಡಿನಾ ಅಥವಾ ಮಹಾರಾಷ್ಟ್ರ ವಸೂಲಿ ಅಘಾಡಿನಾ..? ಎಂದು ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಮಾತಾಡದಿದ್ದರೇ, ರಾಜ್ಯಪಾಲರು ಈ ಬಗ್ಗೆ ಕೇಳಬಹದು. ಕನಿಷ್ಠ ಪಕ್ಷ ವರದಿಯನ್ನಾದರೂ ಪಡೆಯಬಹುದು ಎಂದು ಫಡ್ನವಿಸ್ ಆಕ್ರೋಶ ಹೊರ ಹಾಕಿದ್ದಾರೆ.
ಓದಿ : ಏಪ್ರಿಲ್ 27 ರಂದು ಪತ್ರಕರ್ತ ತರುಣ್ ತೇಜ್ ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು