ಮುಂಬಯಿ: ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದ ಮಹಾರಾಷ್ಟ್ರದ ಪಕ್ಷೇತರ ಸಂಸದೆ ನವ್ ನೀತ್ ಕೌರ್ ರಾಣಾಗೆ ಬಾಂಬೆ ಹೈಕೋರ್ಟ್ ಮಂಗಳವಾರ(ಜೂನ್ 08) ಎರಡು ಲಕ್ಷ ರೂಪಾಯಿ ಮೊತ್ತದ ದಂಡ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾಸ್ಕರ್ ಶೆಟ್ಟಿ, ರಾಜೇಶ್ವರಿ-ನಿರಂಜನ್ ಮತ್ತು ಹೋಮಕುಂಡ.. 5 ವರ್ಷಗಳ ಹಿಂದೆ ನಡೆದಿದ್ದೇನು?
ಅಮರಾವತಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದೆಯಾಗಿ ಕೌರ್ ಆಯ್ಕೆಯಾಗಿದ್ದು, ಅಮರಾವತಿ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಎರಡನೇ ಅತೀ ದೊಡ್ಡ ನಗರವಾಗಿದೆ. ಇದೀಗ ಕೌರ್ ಗೆ ಸಂಸದೆ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಈ ಬಗ್ಗೆ ಕೋರ್ಟ್ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದೆ.
ಕೌರ್ (35ವರ್ಷ) ಏಳು ಭಾಷೆಗಳನ್ನು ಮಾತನಾಡುತ್ತಿದ್ದು, ಈಕೆ ಮಹಾರಾಷ್ಟ್ರದ ಎಂಟು ಮಂದಿ ಸಂಸದರಲ್ಲಿ ಒಬ್ಬರಾಗಿದ್ದಾರೆ. ನಟರಾಗಿದ್ದ ಕೌರ್ ರಾಜಕಾರಣಿಯಾಗಿ ಸಂಸದೆಯಾಗಿ ಆಯ್ಕೆಯಾಗಿದ್ದನ್ನು ಮಾಜಿ ಸಂಸದ, ಶಿವಸೇನಾ ಮುಖಂಡ ಆನಂದರಾವ್ ಅಡ್ಸುಲ್ ಮೇಲ್ಮನವಿ ಸಲ್ಲಿಸಿದ್ದರು.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಜೈಲಿಗೆ ಕಳುಹಿಸುವುದಾಗಿ ಶಿವಸೇನಾ ಸಂಸದ ಅರವಿಂದ್ ಸಾವಂತ್ ಲೋಕಸಭೆಯ ಆವರಣದೊಳಗೆ ಬೆದರಿಕೆ ಹಾಕಿರುವುದಾಗಿ ಕೌರ್ ಆರೋಪಿಸಿದ್ದರು. ಶಿವಸೇನಾ ಲೆಟರ್ ಹೆಡ್ ಮತ್ತು ಮೊಬೈಲ್ ಕರೆ ಮೂಲಕ ಆ್ಯಸಿಡ್ ದಾಳಿ ನಡೆಸುವ ಬೆದರಿಕೆ ಕರೆ ಸ್ವೀಕರಿಸುವುದಾಗಿ ಸಂಸದೆ ಕೌರ್ ಸ್ಪೀಕರ್ ಒಂ ಬಿರ್ಲಾ ಅವರ ಬಳಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.