Advertisement

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

04:07 PM Oct 07, 2024 | Team Udayavani |

ನಾಗ್ಪುರ: ಆಯುರ್ವೇದ ವೈದ್ಯ ಎಂದು ನಂಬಿಸಿ ಕಳೆದ ಆರು ವರ್ಷಗಳಿಂದ ಜನರನ್ನು ವಂಚಿಸುತ್ತಾ ಬಂದಿದ್ದ ನಕಲಿ ವೈದ್ಯನ ವಿರುದ್ಧ ದೂರು ದಾಖಲಾಗಿದ್ದು, ಇದೀಗ ನಕಲಿ ವೈದ್ಯ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

Advertisement

ಆಯುರ್ವೇದಿಕ್‌ ಮೆಡಿಸಿನ್‌ and ಸರ್ಜರಿ ಸರ್ಟಿಫಿಕೇಟ್‌ ಅನ್ನು ಕ್ಲಿನಿಕ್‌ ನಲ್ಲಿ ಇಟ್ಟುಕೊಂಡಿದ್ದ ನಕಲಿ ವೈದ್ಯ ಮನೋಜ್‌ ಕುಮಾರ್‌ ಹನ್ವಾಟೆ (42) ಬಂಧನದಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿರುವುದಾಗಿ ವರದಿ ವಿವರಿಸಿದೆ.

ಆರು ವರ್ಷಗಳ ಹಿಂದೆ ಸಮತಾ ನಗರದ ನಿವಾಸಿ ಮನೋಜ್‌ ಕುಮಾರ್ ನಾಗ್ಪುರದ ಜರಿಪಟ್ಕಾ ಪ್ರದೇಶದಲ್ಲಿ ಕ್ಲಿನಕ್‌ ಅನ್ನು ತೆರೆದು, ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ನ್ಯೂಸ್‌ ಏಜೆನ್ಸಿ ಪಿಟಿಐ ವರದಿ ಮಾಡಿದೆ.

ಕೆಲವು ರೋಗಿಗಳು ಮನೋಜ್‌ ಕಯಮಾರ್‌ ವಿರುದ್ಧ  ಆರೋಗ್ಯ ಇಲಾಖೆಗೆ ದೂರು ನೀಡಿದ್ದರು. ಅಲ್ಲದೇ ಆತನ ಡಿಗ್ರಿ ಸರ್ಟಿಫಕೇಟ್‌ ಅನ್ನು ವೆರಿಫಿಕೇಶನ್‌ ಗಾಗಿ ಮೆಡಿಕಲ್‌ ಕೌನ್ಸಿಲ್‌ ಗೆ ಕಳುಹಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next