Advertisement

Maharashtra Polls: ಘರ್ಷಣೆ, ವಾಗ್ವಾದ ನಡುವೆ ಮಹಾರಾಷ್ಟ್ರ ಮತ ಕುಸಿತ

08:25 AM Nov 21, 2024 | Team Udayavani |

ಮುಂಬಯಿ: ಮಹಾಯುತಿ ಮತ್ತು ಮಹಾ ಅಘಾಡಿಗಳ ಘರ್ಷಣೆ, ವಾಗ್ವಾದದ ನಡುವೆಯೇ ಈ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಮತ ಪ್ರಮಾಣ ಕುಸಿತವಾಗಿದೆ. ರಾಜ್ಯದ 288 ವಿಧಾನಸಭೆ ಕ್ಷೇತ್ರಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನವಾಗಿದ್ದು, ಶೇ. 60ರಷ್ಟು ಮತದಾನವಾಗಿದೆ. 2019ರಲ್ಲಿ ಶೇ.61.74ರಷ್ಟು ಮತದಾನ ದಾಖಲಾಗಿತ್ತು.

Advertisement

ಮತದಾನಕ್ಕೆ ತೆರೆ ಬೀಳುವ ಮೂಲಕ ರಾಜ್ಯದ 4,136 ಅಭ್ಯರ್ಥಿಗಳ ಅದೃಷ್ಟ ಮತಪೆಟ್ಟಿಗೆಯಲ್ಲಿ ಭದ್ರವಾ ದಂತಾಗಿದೆ. ನ.23ರಂದು ಫ‌ಲಿತಾಂಶ ಪ್ರಕಟವಾಗ ಲಿದೆ. ಕೆಲವೆಡೆ ವಾಗ್ವಾದ ಘರ್ಷಣೆಗಳೂ ಉಂಟಾಗಿ ದೆ. ಉಳಿದಂತೆ ಮತದಾನ ಶಾಂತಿಯುತವಾಗಿತ್ತು.

ಬಾಲಿವುಡ್‌ ನಟ ನಟಿಯರಾದ ಅಕ್ಷಯ ಕುಮಾರ್‌, ಶಾರುಖ್‌ , ರಣಬೀರ್‌ ಕಪೂರ್‌, ಸೇರಿ ಪಮುಖರು ಹಕ್ಕು ಚಲಾ ವಣೆ ಮಾಡಿದ್ದಾರೆ. ಗಡಿcರೋಲಿಯಲ್ಲಿ ಶೇ. 69 ಮತದಾನವಾಗಿದ್ದು, ಇದು ರಾಜ್ಯದಲ್ಲೇ ಅತೀಹೆಚ್ಚು ಮತದಾನ ದಾಖಲಾದ ಜಿಲ್ಲೆಯಾಗಿದೆ.

ಶತಾಯುಷಿಗಳ ಮತದಾನ: ಮಲಬಾರ್‌ ಹಿಲ್‌ನಲ್ಲಿ 113 ವರ್ಷದ ಹಾಗೂ 103 ವರ್ಷದ ಮತದಾರರು ಗಾಲಿಕುರ್ಚಿಯಲ್ಲಿ ತೆರಳಿ ಮತ ಚಲಾಯಿಸಿದ್ದಾರೆ.
ನಾಂದೇಡ್‌ ಉಪ ಚುನಾವಣೆ, ಶೇ.53 ಮತದಾನ: ನಾಂದೇಡ್‌ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದ್ದು, ಶೇ.53.78 ರಷ್ಟು ಮತದಾನವಾಗಿದೆ.

ಎನ್‌ಸಿಪಿ ನಾಯಕನ ಮೇಲೆ ಹಲ್ಲೆ, ಮತಗಟ್ಟೆ ಧ್ವಂಸ!
ಪರ್ಲಿ ಕ್ಷೇತ್ರದ ಘಟಂದೂರ್‌ ಮತಗಟ್ಟೆಗೆ ಲಗ್ಗೆ ಇಟ್ಟು, ಇವಿಎಂ ಎಸೆದು, ಮತಗಟ್ಟೆ ಧ್ವಂಸಗೊಳಿಸಿ, ಶರದ್‌ ಪವರ್‌ ಬಣದ ನಾಯಕ ಮಾಧವ್‌ ಜಾಧವ್‌ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ದ್ದಾರೆ. ಹಾಳಾದ ಇವಿಎಂಗಳ ಮೂಲಕ ಈಗಾ ಗಲೇ ಚಲಾವಣೆಯಾದ ಮತ ಸುರಕ್ಷಿ ತ ವಾ ಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಹೃದಯಘಾತದಿಂದ ಪಕ್ಷೇತರ ಅಭ್ಯರ್ಥಿ ಸಾವು
ಮತ ಚಲಾಯಿಸಲು ಸರದಿಯಲ್ಲಿ ಕಾಯುತ್ತಿದ್ದ ಮಹಾರಾಷ್ಟ್ರದ ಬೀಡ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಾಳಾಸಾಹೇಬ್‌ ಶಿಂಧೆ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ. ನೆಲದ ಮೇಲೆ ಕುಸಿದು ಬಿದ್ದ ಶಿಂಧೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next