Advertisement

ಮಹಾರಾಷ್ಟ್ರ ದಿನದ ಪ್ರಯುಕ್ತ ಇಂದು ಬುಧವಾರ ಮುಂಬಯಿ ಶೇರು ಮಾರುಕಟ್ಟೆ ಬಂದ್‌

09:15 AM May 02, 2019 | |

ಮುಂಬಯಿ : ‘ಮಹಾರಾಷ್ಟ್ರ ದಿನ’ ದ ಪ್ರಯುಕ್ತ ಇಂದು ಬುಧವಾರ ಮುಂಬಯಿ ಶೇರು ಮಾರುಕಟ್ಟೆ, ರಾಷ್ಟ್ರೀಯ ಶೇರು ಮಾರುಕಟ್ಟೆ, ಫೋರೆಕ್ಸ್‌ ಮತ್ತು ಹಣಕಾಸು ಮಾರುಕಟ್ಟೆಗಳು ಮುಚ್ಚಿವೆ.

Advertisement

ನಿನ್ನೆ ಮಂಗಳವಾರ ದಿನಪೂರ್ತಿ ಏಳುಬೀಳುಗಳನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕೆಳಮಟ್ಟಕ್ಕೆ ಜಾರುವ ಮೂಲಕ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಸಮಾಪನಗೊಳಿಸಿದ್ದವು. ಎಸ್‌ ಬ್ಯಾಂಕ್‌ ಶೇರು ಧಾರಣೆ ಶೇ.30ರಷ್ಟು ಕುಸಿದದ್ದೇ ನಿನ್ನೆಯ ಮಹತ್ತರ ವಿದ್ಯಮಾನ ಎನಿಸಿಕೊಂಡಿತ್ತು.

ಸೆನ್ಸೆಕ್ಸ್‌ ನಿನ್ನೆ ಮಂಗಳವಾರ 35.78 ಅಂಕಗಳ ನಷ್ಟದೊಂದಿಗೆ 39,031.55 ಅಂಕಗಳ ಮಟ್ಟಕ್ಕೆ ಕುಸಿದಿತ್ತಾದರೆ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.06 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,748.15 ರೂ. ಮಟ್ಟದಲ್ಲಿ ಕೊನೆಗೊಳಿಸಿತ್ತು.

ಟಾಪ್‌ ಲೂಸರ್‌ಗಳಾಗಿದ್ದ ಇಂಡಸ್‌ಇಂಡ್‌ ಬ್ಯಾಂಕ್‌, ಹೀರೋ ಮೋಟೋ ಕಾರ್ಪ್‌, ಮಾರುತಿ ಸುಜುಕಿ, ಪವರ್‌ ಗ್ರಿಡ್‌, ಮಹೀಂದ್ರ ಶೇರುಗಳು ಶೇ.5.21ರಷ್ಟು ಕುಸಿದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next