ಮುಂಬೈ: ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (61)ಇದೀಗ ಗುಣಮುಖರಾಗಿದ್ದಾರೆ. ಹೀಗಾಗಿ, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಮುಂಬೈನ ಎಚ್.ಎನ್.ರಿಲಯನ್ಸ್ ಹಾಸ್ಪಿಟಲ್ ಆಸ್ಪತ್ರೆಗೆ ಮುಖ್ಯಮಂತ್ರಿ ಉದ್ಧವ್ ಅವರನ್ನು ನ.12ರಂದು ದಾಖಲಿಸಲಾಗಿತ್ತು.
ಮುಖ್ಯಮಂತ್ರಿ ಅವರ ಕಚೇರಿ ವತಿಯಿಂದ ಉದ್ಧವ್ ಠಾಕ್ರೆ ಆರೋಗ್ಯದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಅದರ ಪ್ರಕಾರ ಆಸ್ಪತ್ರೆಯ ವೈದ್ಯ ಡಾ.ಅಜಿತ್ ದೇಸಾಯಿ ನೀಡಿದ ಮಾಹಿತಿಯಂತೆ ಮುಖ್ಯಮಂತ್ರಿಗಳನ್ನು ಎಚ್.ಎನ್.ರಿಲಯನ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇದನ್ನೂ ಓದಿ:ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ
ಮುಂದಿನ ಕೆಲವು ದಿನಗಳ ಕಾಲ ಅವರು ಮನೆಯಿಂದಲೇ ಸರ್ಕಾರದ ಕೆಲಸಗಳನ್ನು ನಿರ್ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ’ ಎಂದು ತಿಳಿಸಲಾಗಿದೆ.
ಇದೇ ವೇಳೆ ವಿಧಾನಸಭೆ ಚಳಿಗಾಲದ ಅಧಿವೇಶನ ಡಿ.22ರಿಂದ ಡಿ.28ರ ವರೆಗೆ ನಾಗ್ಪುರದ ಬದಲಾಗಿ ಮುಂಬೈನಲ್ಲಿಯೇ ನಡೆಯಲಿದೆ ಎಂದು ಹೇಳಿದ್ದಾರೆ.