ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಡಿ (ಎಂವಿಎ) ಸರ್ಕಾರ ಎರಡು ವರ್ಷದ ಅಧಿಕಾರ ಪೂರ್ಣಗೊಳಿಸಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿದ್ದು, ತಮ್ಮ ಸರ್ಕಾರವನ್ನು ಜನರ ಸರ್ಕಾರವೆಂದು ಕರೆದಿದ್ದಾರೆ.
ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೆನ್ನು ಮೂಳೆ ಚಿಕಿತ್ಸೆಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿರುವ ಠಾಕ್ರೆ ಅವರು ಭಾನುವಾರದಂದು ಈ ವಿಚಾರವಾಗಿ ಮಾತನಾಡಿದ್ದಾರೆ.
ನೈಸರ್ಗಿಕ ವಿಪತ್ತು ಸೇರಿ ಯಾವುದೇ ಕಷ್ಟದ ಸಮಯದಲ್ಲಿ ನಾವು ಗೊಂದಲಕ್ಕೊಳಗಾಗಲಿಲ್ಲ. ನಮ್ಮ ಸರ್ಕಾರದ 2 ವರ್ಷದಲ್ಲಿ ಅತಿ ಹೆಚ್ಚು ಸಮಯವನ್ನು ನಾವು ಕೊರೊನಾ ನಿಯಂತ್ರಣದಲ್ಲೇ ತೊಡಗಿಸಿಕೊಂಡಿದ್ದೇವೆ.
ಇದನ್ನೂ ಓದಿ:ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ
ಕಷ್ಟದ ಸಮಯವನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದಿದ್ದ ರಾಜ್ಯದ ಆರೋಗ್ಯ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಸಾಕಷ್ಟು ಬದಲಾವಣೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಶಿವಸೇನೆಯ ಸಂಸದ ಸಂಜಯ್ ರಾವತ್ ಕೂಡ ಮಾತನಾಡಿದ್ದು, ನಮ್ಮ ಸರ್ಕಾರವನ್ನು ಉರುಳಿಸುವುದಾಗಿ ವಿರೋಧ ಪಕ್ಷದವರೂ ಸದಾ ಹೇಳಿಕೊಂಡು ಬಂದಿದ್ದಾರೆ. ಆದರದು ಸಾಧ್ಯವಿಲ್ಲ. ವಿರೋಧ ಪಕ್ಷಗಳಿಗೆ ಸರಿಯಾದ ನಿರ್ದೇಶನವೇ ಇಲ್ಲ.’ ಎಂದು ಹೇಳಿದ್ದಾರೆ.