Advertisement

ಪವಾಡದಿಂದ ಸೋಂಕು ನಿರ್ಮೂಲನೆಯಾಗಲಿ

08:10 AM Jul 02, 2020 | mahesh |

ಹೊಸದಿಲ್ಲಿ: ಆಷಾಢ ಏಕಾದಶಿ ಪ್ರಯುಕ್ತ ಪಂಢರಪುರದ ವಿಠಲ ದೇವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬುಧವಾರ ಮಹಾಪೂಜೆ ನೆರವೇರಿಸಿದ್ದು, ಕೋವಿಡ್ ನಿರ್ಮೂಲನೆಗಾಗಿ ಪವಾಡ ಸಂಭವಿಸಲಿ ಎಂದು ಪ್ರಾರ್ಥಿಸಿದ್ದಾರೆ. ನಮಗೀಗ ಪವಾಡದ ಅಗತ್ಯವಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾನವರು ಕೈಚೆಲ್ಲಿದ್ದಾರೆ. ಈ ಸೋಂಕಿಗೆ ಔಷಧವಿಲ್ಲ, ಲಸಿಕೆ ಇಲ್ಲ, ಏನೂ ಇಲ್ಲ. ಜೀವನವಿಡೀ ಬಾಯಿಗೆ ಬಟ್ಟೆ ಕಟ್ಟಿಕೊಂಡು ಜೀವಿಸಲು ಸಾಧ್ಯವೇ? ಹೀಗಾಗಿ ಯಾವುದಾದರೂ ಪವಾಡದ ಮೂಲಕ ಈ ಸೋಂಕಿನಿಂದ ಜಗತ್ತನ್ನು ಮುಕ್ತಿಗೊಳಿಸು ಎಂದು ಪ್ರಾರ್ಥಿಸಿದ್ದೇನೆ ಎಂದಿದ್ದಾರೆ ಠಾಕ್ರೆ.

Advertisement

ಠಾಕ್ರೆ ಅವರೊಂದಿಗೆ ಪತ್ನಿ ರಶ್ಮಿ, ಪುತ್ರ ಆದಿತ್ಯ ಠಾಕ್ರೆ ಕೂಡ ಮಹಾಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ವೇಳೆ ಆದಿತ್ಯ ಅವರಿಗೆ ತೀವ್ರ ಬಳಲಿಕೆ ಕಾಣಿಸಿಕೊಂಡ ಕಾರಣ, ಅವರು ಮರಳಿ ತಮ್ಮ ಕಾರಿನಲ್ಲಿ ಕುಳಿತು ಸ್ವಲ್ಪ ಹೊತ್ತು ವಿರಮಿಸಿದರು. ಪ್ರತಿ ವರ್ಷ ಆಷಾಢ ಏಕಾದಶಿ ದಿನ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಸೋಲಾಪುರ­ದಲ್ಲಿರುವ ದೇಗುಲಕ್ಕೆ ಭೇಟಿ ನೀಡುತ್ತಾರೆ. ಆದರೆ, ಈ ಬಾರಿ ಕೇವಲ ಬೆರಳೆಣಿಕೆಯ ಮಂದಿಯಷ್ಟೇ ದೇವಾಲಯದಲ್ಲಿ ನೆರೆದಿದ್ದು ಕಂಡುಬಂತು. ಹೆಚ್ಚು ಜನಸಂದಣಿ ಸೇರದಂತೆ ತಡೆಯಲು ಮಂಗಳವಾರವೇ ಪಂಢರಪುರದಲ್ಲಿ ಕರ್ಫ್ಯೂ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next