Advertisement

Maharashtra; ನಗರ ನಕ್ಸಲರನ್ನು ಮಟ್ಟ ಹಾಕಲು ಮಸೂದೆ ಮಂಡನೆ!

12:50 AM Jul 13, 2024 | Team Udayavani |

ಮುಂಬಯಿ: ನಗರ ನಕ್ಸಲರನ್ನು ಮಟ್ಟ ಹಾಕಲು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗುರುವಾರ, “2024ರ ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ’ಯನ್ನು ಮಂಡಿಸಲಾಗಿದೆ. ಈಗ ಅಸ್ತಿತ್ವದಲ್ಲಿರುವ ಕಾನೂನುಗಳು ನಕ್ಸಲ್‌ ಸಹಾನು ಭೂತಿದಾರರನ್ನು ಶಿಕ್ಷಿಸುವಷ್ಟು ಸಶಕ್ತವಾಗಿಲ್ಲ.

Advertisement

ಮಸೂದೆಯ ಪ್ರಕಾರ, ನಕ್ಸಲ್‌ ಸಮಸ್ಯೆ ಈಗ ನಕ್ಸಲ್‌ ಪೀಡಿತ ಪ್ರದೇಶಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಅದೀಗ ನಕ್ಸಲ್‌ ಮುಂಚೂಣಿಯ ಸಂಸ್ಥೆಗಳ ಮೂಲಕ ನಗರ ಪ್ರದೇಶಗಳಲ್ಲೂ ಹಬ್ಬಿಕೊಂಡಿದೆ. ಹಾಗಾಗಿ ಮಹಾರಾಷ್ಟ್ರದ ನಗರಗಳಲ್ಲಿ ನಕ್ಸಲ್‌ ಚಟುವಟಿಕೆಗೆ ಆಶ್ರಯ ಒದಗಿಸುವ ಮತ್ತು ಸುರಕ್ಷಿತ ತಾಣಗಳನ್ನು ಒದಗಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ಹೊಸ ಕಾನೂನು ಹೆಚ್ಚು ಬಲವನ್ನು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next