Advertisement
ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ವಾಸೈನಲ್ಲಿನ ವಿಜಯ್ ವಲ್ಲಭ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 13 ಮಂದಿ ಸಜೀವ ದಹನವಾಗಿದ್ದಲ್ಲದೇ ಹಲವು ರೋಗಿಗಳಿಗೆ ಸುಟ್ಟ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಯಾಗಿದೆ.
Related Articles
Advertisement
ಮಹಾರಾಷ್ಟ್ರದ ವಾಸೈನ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 3.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಐಸಿಯುನಲ್ಲಿದ್ದ ಏರ್ ಕಂಡೀಷನರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಐಸಿಯುನಲ್ಲಿದ್ದ 17 ಮಂದಿ ಕೋವಿಡ್ ರೋಗಿಗಳಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇನ್ನು, ಈ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತುರ್ತಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಹೇಳಿದ್ದಾರೆ. ಈ ಘಟನೆಗೂ ಕೇವಲ 24 ಗಂಟೆ ಮೊದಲು ಮಹಾರಾಷ್ಟ್ರದ ನಾಸಿಕ್ನಲ್ಲಿ ಡಾ. ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾಗಿ 24 ರೋಗಿಗಳು ಸಾವನ್ನಪ್ಪಿದ್ದರು. ಆಮ್ಲಜನಕ ಸೋರಿಕೆಯಿಂದಾಗಿ 24 ರೋಗಿಗಳು ಮೃತಪಟ್ಟಿದ್ದರು.ಈ ದುರ್ಘಟನೆಯ ಬೆನ್ನಲ್ಲೆ ಬೆಂಕಿ ಅವಘಡ ಉಂಟಾಗಿದೆ. ಇದನ್ನೂ ಓದಿ : ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ