Advertisement
ಹುಬ್ಬಳ್ಳಿ ಟೈಗರ್ ಮತ್ತು ಮೈಸೂರು ವಾರಿಯರ್ ಸೆಮಿಫೈನಲ್ ಪ್ರವೇಶಿಸಿದ ಮೊದಲೆರಡು ತಂಡಗಳಾಗಿವೆ.ದಿನದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು 11 ರನ್ನುಗಳಿಂದ ಪರಾಭವಗೊಳಿಸಿದ ಶಿವಮೊಗ್ಗ ಲಯನ್ಸ್ 4ನೇ ತಂಡವಾಗಿ ಸೆಮಿಫೈನಲ್ ತಲುಪಿತು. ಈ ಫಲಿತಾಂಶದಿಂದ ಮಂಗಳೂರು ತಂಡ ಕೂಟದಿಂದ ನಿರ್ಗಮಿಸಿತು.
Related Articles
ಚೇಸಿಂಗ್ ವೇಳೆ ಗುಲ್ಬರ್ಗ ಆರಂಭಿಕರಾದ ಎಲ್.ಆರ್. ಚೇತನ್-ಅನೀಶ್ ಕೆ.ವಿ. ಅಮೋಘ ಜತೆಯಾಟ ನಿಭಾಯಿಸಿದರು. 11.2 ಓವರ್‌ಗಳಲ್ಲಿ 114 ರನ್ ಪೇರಿಸಿ ಮಂಗಳೂರು ಬೌಲರ್‌ಗಳಿಗೆ ಬೆವರಿಳಿಸಿದರು. ಅನೀಶ್ ಅವರದು ಅಜೇಯ 72 ರನ್ ಕೊಡುಗೆ (42 ಎಸೆತ, 5 ಬೌಂಡರಿ, 4 ಸಿಕ್ಸರ್). ಚೇತನ್ 37 ಎಸೆತ ಎದುರಿಸಿ 58 ರನ್ ಮಾಡಿದರು (6 ಬೌಂಡರಿ, 3 ಸಿಕ್ಸರ್).
Advertisement
ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರ್ಯಾಗನ್ಸ್-19.1 ಓವರ್‌ಗಳಲ್ಲಿ 144 (ಅನಿರುದ್ಧ ಜೋಶಿ 46, ಶರತ್ ಬಿ.ಆರ್. 38, ತಿಪ್ಪಾ ರೆಡ್ಡಿ 27, ಅಭಿಲಾಷ್ ಶೆಟ್ಟಿ 33ಕ್ಕೆ 3, ವಿಜಯ್‌ಕುಮಾರ್ ವೈಶಾಖ್ 20ಕ್ಕೆ 2, ಹಾರ್ದಿಕ್ ರಾಜ್ 24ಕ್ಕೆ 2). ಗುಲ್ಬರ್ಗ ಮಿಸ್ಟಿಕ್ಸ್-15.3 ಓವರ್‌ಗಳಲ್ಲಿ 2 ವಿಕೆಟಿಗೆ 145 (ಅನೀಶ್ ಕೆ.ವಿ. ಔಟಾಗದೆ 72, ಎಲ್.ಆರ್. ಚೇತನ್ 58, ಕೆ. ಗೌತಮ್ 21ಕ್ಕೆ 2).