Advertisement

13ರಿಂದ ಮಹಾಂತ ಶ್ರೀಗಳ ಜಾತ್ರೆ

06:26 PM Feb 10, 2022 | Team Udayavani |

ಮುಳಗುಂದ: ಪಟ್ಟಣದ ಆರಾಧ್ಯ ದೈವ, ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 163ನೇ ಸ್ಮರಣೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವವನ್ನು ಫೆ.13 ರಿಂದ 15ರ ವರೆಗೆ ಕೋವಿಡ್‌ ಮಾರ್ಗಸೂಚಿ ಅನ್ವಯ ಸರಳವಾಗಿ ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ಸಮ್ಮುಖದಲ್ಲಿ ಆಚರಿಸಲಾಗುವುದು ಎಂದು ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಬಡ್ನಿ ಹೇಳಿದರು.

Advertisement

ಈ ಕುರಿತು ಶ್ರೀ ಮಠದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ.13 ರಂದು ಬೆಳಗ್ಗೆ 8.30 ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಅಗಡಿ ಗುತ್ತಲ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ನೆರವೇರಿಸಲಿದ್ದು, ಕಂಪ್ಲಿ ಕಲ್ಮಠದ ಪ್ರಭು ಸ್ವಾಮೀಜಿ, ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಸಮ್ಮುಖ ವಹಿಸುವರು ಎಂದು ತಿಳಿಸಿದರು.

ಸಾಯಂಕಾಲ 7 ಗಂಟೆಗೆ ಜಾತ್ರಾ ಮಹೋತ್ಸವ ಉದ್ಘಾಟನೆ ಹಾಗೂ ಅನುಭಾವ ಗೋಷ್ಠಿಯ ಸಾನ್ನಿಧ್ಯವನ್ನು ಯರನಾಳ ವಿರಕ್ತಮಠದ ಅಭಿನವ ರೇವಣ ಸಿದ್ಧೇಶ್ವರ ಸ್ವಾಮೀಜಿ, ರಾಣಿಬೆನ್ನೂರಿನ ಗುರುಬಸವ ಸ್ವಾಮೀಜಿ, ಅಧ್ಯಕ್ಷತೆಯನ್ನು ಶಿವಣ್ಣ ನೀಲಗುಂದ ವಹಿಸುವರು. ಎಚ್‌.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಫೆ.14 ರಂದು ಮಧ್ಯಾಹ್ನ 1ಗಂಟೆಗೆ ಮಹಾದಾಸೋಹ, ಸಾಯಂಕಾಲ 5 ಗಂಟೆಗೆ ರಥೋತ್ಸವ, ಸಾಯಂಕಾಲ 7 ಗಂಟೆಗೆ ಅನುಭಾವ
ಗೋಷ್ಠಿ 2 ರ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಡಿ.ಆರ್‌. ಪಾಟೀಲ, ಎಸ್‌.ಎಸ್‌. ಪಾಟೀಲ ಇತರರು ಭಾಗವಹಿಸುವರು.

ಫೆ.15 ರಂದು ಮಧ್ಯಾಹ್ನ 1ಕ್ಕೆ ಮಹಾ ದಾಸೋಹ, ಸಾಯಂಕಾಲ 5 ಗಂಟೆಗೆ ಮಲ್ಲಿಕಾರ್ಜುನ ಶ್ರೀಗಳಿಂದ ಕಡುಬಿನ ಕಾಳಗ, ಸಾಯಂಕಾಲ 7 ಗಂಟೆಗೆ ಅನುಭಾವಗೋಷ್ಠಿ 3 ರ ಸಾನ್ನಿಧ್ಯವನ್ನು ಗದಗ ತೋಂಟದಾರ್ಯ ಮಠದ ಡಾ| ತೋಂಟದ ಸಿದ್ಧಾರಾಮ ಸ್ವಾಮೀಜಿ ವಹಿಸುವರು. ಸಮ್ಮುಖ ಹಾಗೂ ಗೌರವ ಅಭಿನಂದನೆ ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ನೆರವೇರಿಸುವರು. ಅತಿಥಿಗಳಾಗಿ ಶಿವಕುಮಾರ ಉದಾಸಿ, ಅನಿಲ ಮೆಣಸಿನಕಾಯಿ, ಮಹಾಂತಪ್ಪ ಬಡ್ನಿ ಭಾಗವಹಿಸುವರು. ಅನುಭಾವಗೋಷ್ಠಿ ವಿಶೇಷಿತರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ|ಎಸ್‌.ಸಿ. ಚವಡಿ, ಬಸವರಾಜ ಹಾರೋಗೇರಿ, ಮಹಾಂತೇಶ ಕೋರಿ, ಬಸವರಾಜ ಬಾತಾಖಾನಿ, ಈರಣ್ಣ ತಡಸದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next